ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ಬಳಿ ಭೀಕರ ಅಪಘಾತ: ಆಸ್ಪತ್ರೆಗೆ ಹೊರಟಿದ್ದ ನಾಲ್ವರು ಮಸಣಕ್ಕೆ ಹೋದರು

ಅಣ್ಣಿಗೇರಿ : ಅಣ್ಣಿಗೇರಿ ಸಮೀಪದ ಗದಗ ರಸ್ತೆಯ ದುಂದೂರ ಕ್ರಾಸ ಬಳಿ ಬುಧವಾರ ಬೆಳಗಿನ ಜಾವ ಕಾರ್ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಗಳು ಮಾನ್ವಿ ಮೂಲದವರಾಗಿದ್ದಾರೆ. ಮೃತರು ಸೇರಿದಂತೆ ಒಟ್ಟು 6 ಜನ ಮಾನ್ವಿಯಿಂದ ಹಲಗಾ ಗ್ರಾಮಕ್ಕೆ ಚಿಕಿತ್ಸೆ ಪಡೆಯಲು ಕಾರಿನಲ್ಲಿ ಹೊರಟಿದ್ದರು. ಕ್ರೂಸರ್ ಹುಬ್ಬಳ್ಳಿಯಿಂದ ಬಳ್ಳಾರಿಗೆ ದಿನಪತ್ರಿಕೆ ನೀಡಲು ಹೊರಟಿತ್ತು ಎಂದು ತಿಳಿದು ಬಂದಿದೆ. ಮೃತರಾದ ಒಂದೇ ಕುಟುಂಬದ ಸಣ್ಣ ಗಂಗಣ್ಣ, ನಾಗಮ್ಮ, ಈರಣ್ಣ ಹಾಗೂ ಹನಮಂತ ಎಂದು ತಿಳಿದು ಬಂದಿದೆ. ಗಾಯಾಳುಗಳಾದ ಸಣ್ಣಈರಣ್ಣ ಮತ್ತು ಲಕ್ಷ್ಮಿ ಎಂಬುವರನ್ನು ಚಿಕಿತ್ಸೆಗೆ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಚಂದ್ರಶೇಖರ ಮಠಪತಿ. ಪಿಎಸ್ಐ ಲಾಲಸಾಬ ಜೂಲಕಟ್ಟಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

25/11/2020 09:02 am

Cinque Terre

62.4 K

Cinque Terre

0

ಸಂಬಂಧಿತ ಸುದ್ದಿ