ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನವೊಂದು ಪಲ್ಟಿಯಾಗಿದ್ದು,ಸುಮಾರು 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಕಿರೇಸೂರು ಗ್ರಾಮದ ಬಳಿ ನಡೆದಿದೆ.
ಮುಧೋಳದಿಂದ ಶಿಗ್ಗಾಂವಿಗೆ ಹೋಗುತ್ತಿದ್ದ ವಾಹನ ಎಂದು ತಿಳಿದು ಬಂದಿದ್ದು,ಬೆಳ್ಳಂಬೆಳಿಗ್ಗೆ ವಾಹನ ಪಲ್ಟಿಯಾದ ಪರಿಣಾಮ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ವಾಹನದ ಬಗ್ಗೆ ಹಾಗೂ ಪ್ರಯಾಣಿಕರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.ಘಟನೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Kshetra Samachara
20/11/2020 10:19 am