ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಹಿಡಿ..ಹಿಡಿ... ಎಂದು ಹೋರಿ ಬೆದರಿಸಲು ಹೋದ ವ್ಯಕ್ತಿಗೆ ತೀವ್ರ ಗಾಯ

ಹಾವೇರಿ: ದೀಪಾವಳಿ ಬಂತೂ ಅಂದ್ರೇ ಹಾವೇರಿ ಜಿಲ್ಲೆಯಲ್ಲಿ ಹೋರಿ ಹಬ್ಬದ ಕಳೆ ಎಲ್ಲೆಡೆಯೂ ಮೊಳೆಕೆ ಒಡೆಯುತ್ತದೆ.ಆದರೇ ಈ ಬಾರಿ ಕೂಡ ಅಂತಹದೊಂದು ಹಬ್ಬದ ಆಚರಣೆ ವೇಳೆ ಬಾರಿ ದೊಡ್ಡ ಅನಾಹುತ ಸಂಭವಿಸಿದ್ದು,ಹೋರಿ ಬೆದರಿಸುವ ಹಟ್ಟಿ ಹಬ್ಬ ವ್ಯಕ್ತಿಯೊಬ್ಬನ ಜೀವನಕ್ಕೆ ದಕ್ಕೆ ಉಂಟು ಮಾಡಿದ ಘಟನೆಯೊಂದು ಹಾವೇರಿ ಜಿಲ್ಲೆ ಹಾನಗಲ ತಾಲೂಕಿನ ಕುಸನೂರ ಗ್ರಾಮದಲ್ಲಿ ನಡೆದಿದೆ.

ಮೊನ್ನೆಯಷ್ಟೇ ನಡೆದ ಹಟ್ಟಿ ಹಬ್ಬದ ಪ್ರಯುಕ್ತವಾಗಿ ಹೋರಿ ಬೆದರಿಸುವ ಕೊಬ್ಬರಿ ಹೋರಿ ಹಬ್ಬವನ್ನು ಮಾಡುತ್ತಾರೆ.ಇದೇ ವೇಳೆ ವ್ಯಕ್ತಿಯೊಬ್ಬ ಹೋರಿಯನ್ನು ಹಿಡಿದುಕೊಂಡು ಬರಲು ಹೋದ ಸಂದರ್ಭದಲ್ಲಿ ಹೋರಿಯು ಗುದ್ದಿ ಎದೆಯ ಮೇಲೆ ಕಾಲಿಟ್ಟಿದ್ದು,ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.ಮೋಜಿಗಾಗಿ ಮಾಡುವ ಹಬ್ಬ ವ್ಯಕ್ತಿಯೊಬ್ಬನ ಜೀವನ ಜೊತೆಗೆ ಆಟವಾಡಿದ್ದಂತೂ ಸತ್ಯ.

Edited By : Manjunath H D
Kshetra Samachara

Kshetra Samachara

18/11/2020 05:58 pm

Cinque Terre

54.35 K

Cinque Terre

4

ಸಂಬಂಧಿತ ಸುದ್ದಿ