ನವಲಗುಂದ : ನವಲಗುಂದ ಪಟ್ಟಣದ ಹೊರವಲಯದಲ್ಲಿ ಬುಧವಾರ ನಡೆದ ಆಟೋ ಪಲ್ಟಿ ಪ್ರಕರಣದಲ್ಲಿ ಗಾಯಾಳುಗಳನ್ನು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು, ಆದರೆ ಇಂದು ಮುಂಜಾನೆ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿವೋರ್ವ ಮೃತ ಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇನ್ನುಳಿದವರಿಗೆ ಚಿಕಿತ್ಸೆ ಮುಂದುವರೆದಿದೆ.
ಆಟೋ ಮುಳ್ಳಿನ ಬೇಲಿಯಲ್ಲಿ ಬಿದ್ದಾಗ, ಅವರನ್ನ ಬದುಕಿಸಿದ್ದು ಶರೀಫ ಎನ್ನುವ ವ್ಯಕ್ತಿ ಎಂದು ತಿಳಿದು ಬಂದಿದೆ.
ಆಟೋದ ಹಿಂದೆ ಬೈಕಿನಲ್ಲಿ ಹೋಗುತ್ತಿದ್ದ ಶರೀಫ, ಆಟೋ ಪಲ್ಟಿಯಾದ ಕೆಲವೇ ಸೆಕೆಂಡಗಳಲ್ಲಿ ಮಕ್ಕಳನ್ನ ಮೇಲೆತ್ತುವ ಪ್ರಯತ್ನ ಮಾಡಿದ್ದರು.
Kshetra Samachara
12/11/2020 11:25 am