ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಶಾರ್ಟ್ ಸರ್ಕ್ಯೂಟ್ ಹತ್ತಿ ಮಿಲ್ ಗೆ ಬೆಂಕಿ

ಅಣ್ಣಿಗೇರಿ : ಪಟ್ಟಣದ ಹೊರವಲಯದ ಸುರಕೋಡ್ ಓಣಿಯಲ್ಲಿರುವ ಮಲ್ಲಿಕಾರ್ಜುನ ಹತ್ತಿ ಮಿಲ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್' ನಿಂದ ಬೆಂಕಿ ಅವಘಡ ಸಂಭವಿಸಿದ್ದು ಮಿಲ್ ಒಳಗೆ ಶೇಖರಿಸಿಟ್ಟಿದ್ದ ಹತ್ತಿ ಬೆಂಕಿಗೆ ಆಹುತಿಯಾದ ಘಟನೆ ಇಂದು ಬೆಳ್ಳಂ ಬೆಳಿಗ್ಗೆ ಸಂಭವಿಸಿದೆ.

ಹತ್ತಿ ಮಿಲ್ ಗೆ ಬೆಂಕಿ ಹೊತ್ತಿಕೊಂಡಿದ್ದನ್ನು ನೋಡಿದ ಸ್ಥಳೀಯರು ತಕ್ಷಣ ಅಣ್ಣಿಗೇರಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು ಅಗ್ನಿಶಾಮಕ ದಳ ಹಾಗೂ ಪೊಲೀಸರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಲ್ಲಿಕಾರ್ಜುನ ಸುರಕೋಡ ಎಂಬುವವರ ಒಡೆತನ ಹತ್ತಿ ಮಿಲ್ ಇದಾಗಿದ್ದು ಅಂದಾಜು 10 ಲಕ್ಷ ಮೌಲ್ಯದ ಹತ್ತಿ ಬೆಂಕಿಗೆ ಆಹುತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

10/11/2020 12:23 pm

Cinque Terre

47.52 K

Cinque Terre

0

ಸಂಬಂಧಿತ ಸುದ್ದಿ