ಕಲಘಟಗಿ: ಪಟ್ಟಣದ ಹೊರವಲಯದ ಕಿಲ್ಲೆ ಹಿಂದಿನ ಕಬ್ಬಿನ ಹೊಲಕ್ಕೆ ಹಾಗೂ ಸಂಗ್ರಹಿಸಿಟ್ಟ ಮೆಕ್ಕೆಜೋಳದ ಬಣವೆಗೆ ಆಕಸ್ಮಿಕ ಬೆಂಕಿ ಬಿದ್ದು ಅಪಾರ ಹಾನಿಯಾಗಿರುವ ಘಟನೆ ಸೋಮವಾರ ಜರುಗಿದೆ.
ಪಟ್ಟಣದ ರೈತರಾದ ವಾಸಪ್ಪ ರಾಮಚಂದ್ರ ಪಿರೂಜಿ ಇವರ ಸುಮಾರು 7 ಎಕರೆಯಲ್ಲಿ ಬೆಳೆದ ಕಬ್ಬು ಹಾಗೂ ಸಂಗ್ರಹಿಸಿಟ್ಟ ಮೆಕ್ಕೆಜೋಳದ ಬಣವೆಗೆ ಬೆಂಕಿ ಬಿದ್ದು ಸುಟ್ಟ ಹಾನಿಯಾಗಿದೆ.
ಕಲಘಟಗಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.ಗ್ರಾಮಲೆಕ್ಕಾಧಿಕಾರಿ ಕುಮಾರ ಮುದಕಣ್ಣವರ ಭೇಟಿ ನೀಡಿ ನಷ್ಟದ ಮಾಹಿತಿ ಪಡೆದಿದ್ದಾರೆ.
Kshetra Samachara
21/12/2020 07:55 pm