ಧಾರವಾಡ: ಕಾರೊಂದು ಮನೆಗೆ ಗುದ್ದಿದ ಪರಿಣಾಮ ಕಾರು ಜಖಂಗೊಂಡಿರುವ ಘಟನೆ ಧಾರವಾಡದ ಸಾಧನಕೆರೆಯಲ್ಲಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದ್ದು ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗೋವಾ ರಸ್ತೆ ಮೂಲಕ ಹೊರಟಿದ್ದ ವೇಳೆ ಮನೆಯೊಂದರ ಕಂಪೌಂಡ್ ಗೆ ಈ ಕಾರು ಗುದ್ದಿದೆ. ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದ್ದು, ಗ್ಲಾಸು ಒಡೆದಿದೆ.
ಕಾರು ಯಾರಿಗೆ ಸೇರಿದ್ದು ಎಂಬುದು ತಿಳಿದು ಬಂದಿಲ್ಲ.
Kshetra Samachara
02/11/2020 02:11 pm