ಧಾರವಾಡ: ಟಾಟಾ ಏಸ್ ವಾಹನವು ಚಕ್ಕಡಿಗೆ ಡಿಕ್ಕಿ ಹೊಡೆದ ಪರಿಣಾಮ ರೈತನೋರ್ವ ಗಾಯಗೊಂಡಿರುವ ಘಟನೆ ನವಲಗುಂದ ರಸ್ತೆಯಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಿಂದ ಉಣಕಲ್ ಮೂಲಕ ಹಾದು ಹುಬ್ಬಳ್ಳಿಗೆ ಒಂದು ರಸ್ತೆ ಹೋಗುತ್ತದೆ. ಈ ರಸ್ತೆ ನವಲಗುಂದ ಮುಖ್ಯ ರಸ್ತೆಗೂ ಕೂಡುತ್ತದೆ. ಇದೇ ರಸ್ತೆಯಲ್ಲಿ ಇದೀಗ ಅಪಘಾತವಾಗಿದೆ.
ರಾಯಾಪುರದಿಂದ ಬರುತ್ತಿದ್ದ ಟಾಟಾ ಏಸ್ ವಾಹನವು ಹೊಲದಿಂದ ಬರುತ್ತಿದ್ದ ಮಾರಡಗಿ ಗ್ರಾಮದ ರೈತ ಮಲ್ಲಪ್ಪ ಚಂದ್ರಣ್ಣವರ ಎಂಬುವವರ ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಚಕ್ಕಡಿ ನುಜ್ಜುಗುಜ್ಜಾಗಿದ್ದು, ರೈತ ಮಲ್ಲಪ್ಪನಿಗೆ ಗಾಯಗಳಾದ ಬಗ್ಗೆ ವರದಿಯಾಗಿದೆ.
Kshetra Samachara
29/10/2020 07:14 pm