ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ಉರುಳಿದ ಕಾರು

ಕುಂದಗೋಳ : ಅತಿವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ರಸ್ತೆ ಬಿಟ್ಟು ಪಕ್ಕದ ಹೊಲದಲ್ಲಿ ಉರುಳಿಬಿದ್ದ ಘಟನೆ ಯರಗುಪ್ಪಿಯಿಂದ ಕುಂದಗೋಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯದ ಬೆನಕನಹಳ್ಳಿ ಗ್ರಾಮದ ಬಳಿ ನಡೆದಿದೆ.

ಕೆಎ 04 ಎಎ 9049 ನಂಬರಿನ ಕಾರು ಯರುಗುಪ್ಪಿ ರಸ್ತೆಯಲ್ಲಿ ವೇಗವಾಗಿ ಬರುವಾಗ ಬೆನಕನಹಳ್ಳಿ ಗ್ರಾಮದ ಬಳಿ ರಸ್ತೆ ತಿರುವುಗಳಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ಉರುಳಿದ್ದು ತಕ್ಷಣ ಸ್ಥಳೀಯರು ಕಾರಿನ ಗಾಜು ಒಡೆದು ಚಾಲಕನನ್ನು ಹೊರತೆಗೆದು ಗಾಯಗೊಂಡ ಆತನನ್ನು ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದ್ದು ಅದೃಷ್ಟವಶಾತ್ ಕಾರಿನಲ್ಲಿ ಚಾಲಕ ಒಬ್ಬನೇ ಇದ್ದ ಎಂದು ಸ್ಥಳೀಯರು ತಿಳಿಸಿದ್ದು ಸ್ಥಳಕ್ಕೆ ಕುಂದಗೋಳ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

29/10/2020 02:07 pm

Cinque Terre

36.26 K

Cinque Terre

0

ಸಂಬಂಧಿತ ಸುದ್ದಿ