ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರ್ಯಾಕ್ಟರ್-ಕಾರಿನ ಮಧ್ಯೆ ಡಿಕ್ಕಿ: ನಾಲ್ವರಿಗೆ ಗಾಯ

ಧಾರವಾಡ: ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಗಾಯಗೊಂಡಿರುವ ಘಟನೆ ಧಾರವಾಡ ತಾಲೂಕಿನ ಬಾಡ ಗ್ರಾಮದ ಕ್ರಾಸ್ ಬಳಿ ನಡೆದಿದೆ.

ಟ್ರ್ಯಾಕ್ಟರ್ ಎಂಜಿನ್ ಗೆ ಎರಡು ಟ್ರ್ಯಾಲಿಗಳನ್ನು ಜೋಡಿಸಲಾಗಿತ್ತು. ಇದು ಗೊತ್ತಾಗದೇ ಕಾರು ಚಾಲಕ ಬಾಡ ಗ್ರಾಮದ ಕ್ರಾಸ್ ಬಳಿ ಬಂದಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕಾರಿನಲ್ಲಿದ್ದ ದಾಂಡೇಲಿ ಮೂಲದ ನಾಲ್ವರು ಯುವಕರು ಈ ಅಪಘಾತದಲ್ಲಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದರು.

Edited By :
Kshetra Samachara

Kshetra Samachara

20/10/2020 07:51 pm

Cinque Terre

25.84 K

Cinque Terre

0

ಸಂಬಂಧಿತ ಸುದ್ದಿ