ಕಾರವಾರ : ಉಂಚಳ್ಳಿ ಫಾಲ್ಸ್ ನೋಡಲು ಹೋಗಿದ್ದ ಹುಬ್ಬಳ್ಳಿಯ ಐವರು ಸಾವನ್ನಪ್ಪಿದ ಘಟನೆ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಕೊಡನಮನೆ ಹತ್ತಿರ ನಡೆದಿದೆ.
ಹುಬ್ಬಳ್ಳಿಯ ಮೂಲದವರು ಎಂದು ಶಂಕೆ ವ್ಯಕ್ತವಾಗಿದ್ದು, ಕಾರು ಹಳ್ಳದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇನ್ನೂ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮೃತರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಕಾರ್ಯಾಚರಣೆ ಬಳಿಕವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
Kshetra Samachara
15/10/2020 06:58 pm