ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲೊಂದು ವಿಚಿತ್ರ ಘಟನೆ

ಧಾರವಾಡ: ಧಾರವಾಡದ ಮೃತ್ಯುಂಜಯನಗರ ತೋಟಗೇರ ಓಣಿಯ ಮನೆಯೊಂದರಲ್ಲಿ ಭೂಕುಸಿತವಾಗಿದ್ದು, ಆಳವಾದ ಗುಂಡಿಯೊಂದು ಪತ್ತೆಯಾಗಿದೆ. ಆ ಗುಂಡಿಯಲ್ಲಿ ಸಾಕಷ್ಟು ನೀರು ಶೇಖರಣೆಯಾಗಿದ್ದು, ನೀರು ಹೊರ ಹಾಕಿದಂತೆಲ್ಲ ಮತ್ತೆ ನೀರು ಶೇಖರಣೆಯಾಗುತ್ತಲೇ ಇದೆ.

ನಿನ್ನೆ ಧಾರವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ನಾಗಮ್ಮ ಸಾರಯ್ಯನವರ ಎಂಬುವವರ ಮನೆಯಲ್ಲಿಯೇ ಈ ರೀತಿ ಭೂ ಕುಸಿತವಾಗಿದೆ. ಕೆಳಭಾಗದಲ್ಲಿ ದೊಡ್ಡ ಪ್ರಮಾಣದ ಗುಂಡಿಯೊಂದು ಪತ್ತೆಯಾಗಿದ್ದು, ಆ ಗುಂಡಿಯಲ್ಲಿ ಸಾಕಷ್ಟು ನೀರು ಶೇಖರಣೆಯಾಗಿದೆ. ಮನೆಯವರು ಅದನ್ನು ನೋಡಿ ಒಂದು ಕ್ಷಣ ದಂಗಾಗಿದ್ದಾರೆ. ಕೂಡಲೇ ಮೋಟರ್ ನಿಂದ ನೀರು ಜಗ್ಗಿಸಲಾರಂಭಿಸಿದ್ದಾರೆ. ನೀರು ಹೊರ ಹಾಕಿದಂತೆಲ್ಲ ಆ ಗುಂಡಿಯಲ್ಲಿ ನೀರು ಶೇಖರಣೆಯಾಗುತ್ತಲೇ ಇದೆ. ಇದು ನೋಡುಗರನ್ನು ಒಂದು ಕ್ಷಣ ದಂಗಾಗಿಸಿದೆ.

Edited By : Nagesh Gaonkar
Kshetra Samachara

Kshetra Samachara

11/10/2020 06:25 pm

Cinque Terre

106.3 K

Cinque Terre

7

ಸಂಬಂಧಿತ ಸುದ್ದಿ