ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮೀಣ ಪ್ರದೇಶದ ಜನ, ಖಾಸಗಿ ಆಸ್ಪತ್ರೆ ಎಡವಟ್ಟು ಹಾಗೂ ಹವಮಾನ ವೈಪರಿತ್ಯದಿಂದ ರೋಗರುಜಿನಗಳ ಭಯದಲ್ಲಿಯೇ ದಿನಗಳಿಯುತ್ತಿದ್ದಾರೆ. ಹೌದು ತಾಲೂಕಿನಲ್ಲಿ ಹೆಚ್ಚು ಜನಸಂಖ್ಯೆವುಳ್ಳ ಗ್ರಾಮ ಕೊಕಟನೂರ ದಲ್ಲಿ ಖಾಸಗಿ ಆಸ್ಪತ್ರೆಯದವರ ತ್ಯಾಜ್ಯದ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ತಮ್ಮ ಆಸ್ಪತ್ರೆಗಳಲ್ಲಿ ರೋಗಿಯನ್ನ ಗುಣಪಡಿಸಲು ಉಪಯೋಗಿಸಿದ ವೈದ್ಯಕೀಯ ವಸ್ತುಗಳಾದ ಸಿರಂಜ್, ಸಲೈನ್, ಬ್ಯಾಂಡೇಜ್, ವೇಸ್ಟ್ ಆದ ಔಷಧಿ ಬಾಟಲಿ ಸೇರಿದಂತೆ ಮುಂತಾದ ತ್ಯಾಜ್ಯವನ್ನು ಗ್ರಾಮದ ಅಲ್ಲಲ್ಲಿ ಬಿಸಾಡಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಗ್ರಾಮಸ್ಥರು ಎಷ್ಟೊಂದು ಬಾರಿಗೆ ಮನವಿಯನ್ನು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈಗಾಗಲೇ ಮಾಧ್ಯಮಮಿತ್ರರು ಗ್ರಾಮ ಪಂಚಾಯತಿಯ ಪಿಡಿಒ ಎಸ್ ಎಸ್ ತುಂಗಳ ಅವರಿಗೆ ಸಂಪರ್ಕಿಸಿ ಕೇಳಿದಾಗ, ನನಗೆ ಇಲ್ಲಿವರೆಗೆ ಯಾವುದೇ ಗಮನಕ್ಕೆ ಬಂದಿಲ್ಲ, ಆದಷ್ಟು ಬೇಗ ಅದನ್ನ ಸರಿಪಡಿಸಲಾಗುತ್ತದೆ ಎನ್ನತ್ತಿದ್ದಾರೆಯೇ ಹೊರತು ಸ್ವಚ್ಛತೆಗೆ ಮುಂದಾಗಿಲ್ಲ.
ಕಳೆದ ಮೂರು ನಾಲ್ಕು ವಾರಗಳ ಹಿಂದೆ ಅಥಣಿ ಶಾಸಕರು ಗ್ರಾಮಕ್ಕೆ ಬಂದು ಕಸ ವಿಲೇವಾರಿ ವಾಹನವನ್ನು ಹಸ್ತಾಂತರಿಸಿ ಗ್ರಾಮವನ್ನು ಸ್ವಚ್ಛವಾಗಿಡಿ ಎಂದಿದ್ದರು. ಆದರೆ ಗ್ರಾಮದಲ್ಲಿ ವಾಹನ ಎಲ್ಲಿದೆ ಎನ್ನುವುದೇ ಗೊತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೊರೊನಾ ಎಂಬ ಮಹಾಮಾರಿ ಕಡಿಮೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಈ ಖಾಸಗಿ ಆಸ್ಪತ್ರೆಯವರಿಂದ ಮತ್ತೊಂದು ದೊಡ್ಡ ಮಹಾಮಾರಿ ನಮಗೆ ಎದುರಾಗುತ್ತದೆ ನೋಡಿ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ವರದಿ- ಸಂತೋಷ ಬಡಕಂಬಿ.
PublicNext
19/07/2022 01:03 pm