ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದಲ್ಲಿ ಇಂದು 12 ಸಾವಿರದ ಗಡಿ ದಾಟಿದ ಕೋರೊನಾ ಕೇಸ್​​

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 12,213 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಿನ್ನೆ (ಬುಧವಾರ)ಕ್ಕೆ ಹೊಲಿಕೆ ಮಾಡಿದರೆ ಮೂರೂವರೆ ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಜಾಸ್ತಿ ಕಂಡು ಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 7,624 ಜನರು ಕೋವಿಡ್​​ನಿಂದ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಈವರೆಗೆ 4,26,74,712 ಜನರು ಕೋವಿಡ್​ನಿಂದ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 58,215 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ ಕೋವಿಡ್​ನಿಂದ 11 ಜನ ಸಾವನ್ನಪ್ಪಿದ್ದು, ಈವರೆಗೆ ಕೋವಿಡ್ ಸಾವಿನ ಸಂಖ್ಯೆ 5,24,803 ಇದೆ.

Edited By : Vijay Kumar
PublicNext

PublicNext

16/06/2022 11:56 am

Cinque Terre

48.06 K

Cinque Terre

0