ಲಕ್ನೋ: ರಸ್ತೆ ಬದಿ ಮಾರಾಟವಾಗುವ ಸಮೋಸಾ ಬೆಲೆ ಸಾಮಾನ್ಯವಾಗಿ 10 ರಿಂದ 20 ರೂ. ಇರುತ್ತದೆ. ಒಂದು ಕಪ್ ಟೀ ಜೊತೆ ಸಮೋಸಾ ಸೇವಿಸುವ ಸ್ವಾದವೇ ಬೇರೆಯಾಗಿರುತ್ತದೆ. ಪಂಜಾಬ್‌ನ ಅಮೃತಸರದಲ್ಲಿಯ ಕಳೆದ ಕೆಲವು ದಿನಗಳಿಂದ 75 ವರ್ಷದ ವೃದ್ಧನೋರ್ವ ಸಮೋಸಾ ತಯಾರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೃದ್ಧ ಮಾರುವ ಸಮೋಸಾ ಬೆಲೆ ಕೇಳಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅಮೃತಸರದ ಮಹಾನಾ ಸಿಂಗ್ ರಸ್ತೆಯಲ್ಲಿ ಸಮೋಸಾ ಅಂಗಡಿ ನಡೆಸುತ್ತಿರುವ 75 ವರ್ಷದ ವ್ಯಕ್ತಿಯೊಬ್ಬರು ಕೇವಲ 2.5 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಹಕರೊಬ್ಬರು ಈ ವೃದ್ಧನ ಸಮೋಸಾದ ವೀಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟದಾದ ಅಂಗಡಿಯಲ್ಲಿ ರುಚಿಕರವಾಗಿ ಮತ್ತು ಸ್ವಚ್ಛವಾಗಿ ಸಮೋಸಾ ತಯಾರಿಸುತ್ತಾರೆ. ಇನ್ನು ವಿಡಿಯೋ ನೋಡಿದ ನೆಟ್ಟಿಗರು ಇಂದಿನ ಕಾಲದಲ್ಲಿ ಇಷ್ಟು ಕಡಿಮೆ ಬೆಲೆಗೆ ಸಮೋಸಾ ಸಿಗುತ್ತಾ ಎಂದು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.
PublicNext
05/03/2022 11:09 am