ಜಾರ್ಜಿಯಾ: ಇದೊಂದು ವಿತ್ರ ಖಾಯಿಲೆ. ಈ ಖಾಯಿಲೆಯಿಂದ ಮಗುವಿನ ಕೂದಲಲ್ಲಿ ವಿಚಿತ್ರ ಬದಲಾವಣೆ ಕಾಣುತ್ತದೆ. ಇದು ಅನುವಂಶಿಕತೆಯಿಂದಲೇ ಬರುತ್ತದೆ. ವಿಶ್ವದ ನೂರು ಜನರಲ್ಲಿ ಒಬ್ಬರಿಗೆ ಬರೋ ತೊಂದರೆ ಇದು. ಈಗ ಜಾರ್ಜಿಯಾದ ತಾಯಿಯೊಬ್ಬರು ತಮ್ಮ ಮಗನ ಫೋಟೋ ಹಾಕುವ ಮೂಲಕ ಈ ತೊಂದರೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಜಾರ್ಜಿಯಾದ ಈ ಒಂದು ವರ್ಷದ ಮಗುವಿನ ಹೆಸರು ಲಾಕ್‌ಲಾನ್ ಸ್ಯಾಂಪಲ್ಸ್. ಈತನಿಗೆ ಅನ್‌ಕೋಂಬಬಲ್ ಹೇರ್ ಸಿಂಡ್ರೋಮ್ ಇದೆ. ಇದನ್ನ ವಿರಳಾತಿ ವಿರಳ ತೊಂದರೆ ಅಂತಲೇ ಹೇಳಲಾಗುತ್ತದೆ.
ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಲಾಕ್‌ಲಾನ್ ತಾಯಿ ಇನ್‌ಸ್ಟಾಗ್ರಾಮ್ ಬಳಸಿಕೊಂಡಿದ್ದಾರೆ. ತಮ್ಮ ಮಗನ ಫೋಟೋವನ್ನ ಪೋಸ್ಟ್ ಮಾಡಿಯೇ ಇಂತಹವೊಂದು ತೊಂದರೆ ಮೂರು ತಿಂಗಳಿನಿಂದ 12 ವರ್ಷದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ ಅಂತಲೇ ಜಾಗೃತಿ ಮೂಡಿಸ್ತಿದ್ದಾರೆ.
PublicNext
03/03/2022 04:51 pm