ದಾವಣಗೆರೆ: ದಾವಣಗೆರೆ ಮೂಲದ ಯುವತಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದ್ರೆ ಈ ಯುವತಿ ದಾವಣಗೆರೆಗೆ ಬಂದಿಲ್ಲ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
22 ವರ್ಷದ ಯುವತಿ ಡಿಸೆಂಬರ್ 22 ರಂದು ಯು. ಎಸ್. ಎ ಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಕೊರೊನಾ ಸೋಂಕು ಇರುವುದು ಖಚಿತಪಟ್ಟಿದೆ. ಬಳಿಕ ಜಿನಾಮಿಕ್ ಸೆಕ್ವೀನ್ಸಿಂಗ್ ಗೆ ಕಳಿಸಿದಾಗ ಡಿಸೆಂಬರ್ 28ರಂದು ಒಮಿಕ್ರಾನ್ ಪಾಸಿಟಿವ್ ಬಂದಿದೆ. ಯುವತಿಯು ಲಕ್ಷಣರಹಿತವಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ದಾವಣಗೆರೆಗೆ ಬಂದಿಲ್ಲ. ಅವರ ಸಂಪರ್ಕದಲ್ಲಿದ್ದ ನಾಲ್ವರ ಮಾದರಿ ಪಡೆಯಲಾಗಿದೆ. ವರದಿಗಾಗಿ ಕಾಯಲಾಗುತ್ತಿದೆ.
PublicNext
30/12/2021 09:56 am