ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಲ್ಲಿ ವಿಶ್ವ ದರ್ಜೆಯ ರೋಬೋಟಿಕ್ ಪುನರ್ವಸತಿ ಕೇಂದ್ರ ಆರಂಭ

ಬೆಂಗಳೂರು: ಸಕ್ರ ವರ್ಲ್ಡ್ ಆಸ್ಪತ್ರೆಯು ಕರ್ನಾಟಕದಲ್ಲೇ ಮೊದಲ ಬಾರಿಗೆ ವಿಶ್ವ ದರ್ಜೆಯ ರೋಬೋಟಿಕ್ ಸಹಾಯ ನ್ಯೂರೋ ಪುನರ್ವಸತಿ ಕೇಂದ್ರ ಪ್ರಾರಂಭಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವತ್ ನಾರಾಯಣ್ ಹಾಗೂ ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ ಪುನರ್ವಸತಿ ಕೇಂದ್ರವನ್ನ ಉದ್ಘಾಟಿಸಿದ್ದಾರೆ.

ಸಕ್ರ ವರ್ಲ್ಡ್ ಆಸ್ಪತ್ರೆಯ ಈ ಹೊಸ ರೋಬೋಟಿಕ್ ಅಸಿಸ್ಟೆಡ್ ನ್ಯೂರೋ ಪುನರ್ವಸತಿ ಕೇಂದ್ರದಿಂದ ಪ್ರತಿಯೊಬ್ಬರೂ ಆರೋಗ್ಯದಲ್ಲಿ ರಕ್ಷಣೆ ಕಾಣಬಹುದು. ವಿಶ್ವದ ಅತ್ಯುತ್ತಮ ರೋಬೋಟಿಕ್ ಪುನರ್ವಸತಿ ಘಟಕಗಳು ವಾಕ್ ಬಾಟ್ ಪ್ರೀಮಿಯಂ ಅರ್ಮೀಯೋ ಸ್ಟ್ರಿಂಗ್ ಮತ್ತು ಸೆನ್ಸೋ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮಾನವನ ಚಲನೆಯ ಚಿಕಿತ್ಸೆಗಾಗಿ ಪರಿಹಾರ ನೀಡಲಿದೆ ಎಂದು ಸಚಿವ ಡಾ.ಅಶ್ವತ್ ನಾರಾಯಣ್ ತಿಳಿಸಿದರು.

ನಟ ರಾಘವೇಂದ್ರ ರಾಜಕುಮಾರ ಮಾತನಾಡಿ, ಈ ಹಿಂದೆ ಜನರು ಸುಧಾರಿತ ಪುನರ್ವಸತಿ ಚಿಕಿತ್ಸೆಗಾಗಿ ಹೊರ ದೇಶಗಳಿಗೆ ಹೋಗಬೇಕಾಗಿತ್ತು. ಆದರೆ ಬೆಂಗಳೂರಿನ ಸಕ್ರ ವರ್ಲ್ಡ್ ಆಸ್ಪತ್ರೆಯು ವಿಶ್ವ ದರ್ಜೆಯ ರೋಬೋಟಿಕ್ ಸಹಾಯ ನ್ಯೂರೋ ಪುನರ್ವಸತಿ ಕೇಂದ್ರ ಪ್ರಾರಂಭಿಸಿದ್ದರಿಂದ, ರಾಜ್ಯದ ಜನರು ಉನ್ನತ ಮಟ್ಟದ ಆರೈಕೆಯನ್ನು ಪಡೆಯಬಹುದು ಎಂದು ಹೇಳಿದ್ದಾರೆ.

Edited By : Shivu K
PublicNext

PublicNext

12/12/2021 06:10 pm

Cinque Terre

156.73 K

Cinque Terre

1

ಸಂಬಂಧಿತ ಸುದ್ದಿ