ಚಳಿಗಾಲದಲ್ಲಿ ಚರ್ಮ ಒಣಗುವ ಕಾರಣ ಚರ್ಮದ ಕಿರಿಕಿರಿ, ತುರಿಕೆಗಳು ಉಂಟಾಗುತ್ತದೆ. ಇದಕ್ಕೆ ಈ ಮನೆಮದ್ದು ಟ್ರೈ ಮಾಡಿ.
ವೀಳ್ಯದೆಲೆ ಉರಿಯೂತ ನಿವಾರಿಸುವ ಗುಣಗಳನ್ನು ಹೊಂದಿದೆ. ಇದು ಚರ್ಮದ ಅಲರ್ಜಿಯಿಂದ ಉಂಟಾಗುವ ನೋವನ್ನು ನಿವಾರಿಸುತ್ತದೆ. ಹಾಗಾಗಿ ವೀಳ್ಯದೆಲೆ ತೆಗೆದುಕೊಂಡು ರುಬ್ಬಿ ಪೇಸ್ಟ್ ತಯಾರಿಸಿ ಚರ್ಮಕ್ಕೆ ಹಚ್ಚಿಕೊಳ್ಳಿ, ಇಲ್ಲವಾದರೆ ಬೇವಿನ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿ.
ಅಲೋವೆರಾ ಚರ್ಮವನ್ನು ಮೃದುಗೊಳಿಸುತ್ತದೆ. ಪುದೀನಾ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಹಾಗಾಗಿ ಅಲೋವೆರಾ ಜೆಲ್ ಗೆ ಪುದೀನಾ ರಸ ಮಿಕ್ಸ್ ಮಾಡಿ ಚರ್ಮಕ್ಕೆ ಹಚ್ಚಿ.
ನಿಂಬೆಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಹಾಗಾಗಿ ನಿಂಬೆ ರಸವನ್ನು ಸೇವಿಸುವುದರಿಂದ ಚರ್ಮದ ಅಲರ್ಜಿ ಉಂಟಾಗುವುದಿಲ್ಲ.
PublicNext
05/12/2021 12:21 pm