ಹೆಮ್ಮಾರಿ ಸೋಂಕು ಕೊರೊನಾದಿಂದ ಕಂಗೆಟ್ಟ ಜನಕ್ಕೆ ಸದ್ಯ ಓಮಿಕ್ರಾನ್ ಭಯ ಹೆಚ್ಚಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವಂತಹ ಹೊಸ ರೂಪಾಂತರವನ್ನು `ಒಮಿಕ್ರಾನ್’ ಎಂದು ಹೆಸರಿಸಲಾಗಿದೆ.ಕಳೆದ ಸೋಮವಾರ ದಕ್ಷಿಣ ಆಫ್ರಿಕಾದ ತಜ್ಞರು ಇದನ್ನು ಪತ್ತೆ ಮಾಡಿದ್ದಾರೆ. ಇದು ಸಾರ್ಸ್-ಕೋವಿ-2 ವೈರಸ್ ಗುಂಪಿಗೆ ಸೇರಿದ್ದಾಗಿದೆ.
ಇದು ಡೆಲ್ಟಾ ರೂಪಾಂತರಕ್ಕಿಂತಲೂ ಹೆಚ್ಚು ವೇಗವಾಗಿ ಹರಡಬಲ್ಲದು ಈಗ ಇರುವಂತಹ ಲಸಿಕೆಯು ಇದಕ್ಕೆ ಹೆಚ್ಚು ಪರಿಣಾಮಕಾರಿ ಆಗದು ಎಂದು ಹೇಳಲಾಗುತ್ತಿದೆ.
•ಬಿ.1.1.529 ಬಹು ಪ್ರೋಟೀನ್ ರೂಪಾಂತರವಾಗಿದೆ ಮತ್ತು ಇದು ಹೆಚ್ಚು ಸೋಂಕನ್ನು ಉಂಟು ಮಾಡುವುದು ಎಂದು ತಿಳಿದುಬಂದಿದೆ. ಕಳೆದ ಎರಡು ವಾರಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಎರಡು ಪಟ್ಟು ಕೊರೊನಾ ಸೋಂಕಿತರ ಸಂಖ್ಯೆಯು ಹೆಚ್ಚಾಗಿದೆ.
•ಇದರಲ್ಲಿ ಕೆಲವೊಂದು ರೂಪಾಂತರಗಳು ಮನುಷ್ಯನ ಪ್ರತಿರೋಧಕ ವ್ಯವಸ್ಥೆಯನ್ನು ತಪ್ಪಿಸಿಕೊಂಡು ಹೋಗುವಂತಹ ಶಕ್ತಿ ಹೊಂದಿದೆ. ಕೆಲವೊಂದು ರೂಪಾಂತರಗಳು ಅಲ್ಫಾ ಮತ್ತು ಡೆಲ್ಟಾ ತಳಿಯಲ್ಲಿ ಕಂಡುಬಂದಿದೆ.
•ಇದರಿಂದ ಯಾವ ರೀತಿಯ ಪರಿಣಾಮಗಳು ಆಗಬಹುದು ಎನ್ನುವ ಬಗ್ಗೆ ತಿಳಿಯಲು ಅಧ್ಯಯನಗಳು ನಡೆಯುತ್ತಲಿವೆ.
ರೂಪಾಂತರದ ಸರಪಳಿಯಾಗಿರುವಂತಹ ಎಚ್ 655ಯ+ಎನ್ 679ಕೆ+ಪಿ681ಎಚ್ ತುಂಬಾ ಪರಿಣಾಮಕಾರಿ ಆಗಿ ಮಾನುಷ್ಯನ ಅಂಗಾಂಶಗಳ ಒಳಗಡೆ ಪ್ರವೇಶ ಪಡೆಯುವುದು ಎಂದು ತಜ್ಞರು ಹೇಳಿರುವರು.
ಮುನ್ನೆಚ್ಚರಿಕೆ ಅಗತ್ಯ
•ಲಸಿಕೆಯು ಇಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ಆಸ್ಪತ್ರೆಗೆ ದಾಖಲಾಗುವುದು ಮತ್ತು ಸಾವಿನ ಪ್ರಮಾಣದ ಅಪಾಯದಿಂದ ರಕ್ಷಿಸಲು ಲಸಿಕೆಯನ್ನು ಪಡೆಯುವುದು ಅಗತ್ಯ. ಲಸಿಕೆಯನ್ನು ಸಂಪೂರ್ಣವಾಗಿ ತೆಗೆದು ಕೊಂಡವರಿಗೆ ಇದರ ಪರಿಣಾಮವು ಕಡಿಮೆ ಎಂದು ತಿಳಿದುಬಂದಿದೆ.
•ಮಾಸ್ಕ್ ಧರಿಸುವುದು, ಲಸಿಕೆ ಹಾಕಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ.
PublicNext
29/11/2021 03:15 pm