ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೈಟ್ ಶಿಫ್ಟ್ ಅನಿವಾರ್ಯ : ಆರೋಗ್ಯ ಮರೆಯಬೇಡಿ..

ಪ್ರಸ್ತುತ ದಿನಮಾನಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಅನಿವಾರ್ಯ. ರಾತ್ರಿ ಕೆಲಸ ಮುಗಿಸಿ ಹಗಲು ಸ್ವಲ್ಪ ಹೊತ್ತು ನಿದ್ದೆ ಮಾಡುವ ಅಭ್ಯಾಸ ಬಿಟ್ಟುಬಿಡಿ. ಹಗಲು ಕನಿಷ್ಠ 5-8 ಗಂಟೆ ನಿದ್ದೆ ಮಾಡಿ.

ಎಲ್ಲರಿಗೂ ಹಗಲು ದುಡಿಯಬೇಕು, ರಾತ್ರಿ ನಿದ್ದೆ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ, ಎಲ್ಲಾಉದ್ಯೋಗಗಳು ಹೀಗಿರುವುದಿಲ್ಲ. ರಾತ್ರಿ ಪಾಳಿ ಮಾಡುವುದು ಅನಿವಾರ್ಯವಾಗಿರುತ್ತದೆ.

ಆಹಾರ ಸೇವನೆ ಮರೆಯಬೇಡಿ: ಮುಂಜಾನೆ ಎಂದಿನ ಸಮಯಕ್ಕೆ ಎದ್ದು ತಿಂಡಿ ತಿನ್ನುವ ಅಭ್ಯಾಸ ಮುಂದುವರೆಸಿ ಮಧ್ಯಾಹ್ನ ಸರಿಯಾದ ಸಮಯಕ್ಕೆ ಊಟ ಮಾಡಿರಿ. ಸಾಕಷ್ಟು ಜ್ಯೂಸ್, ಎಳನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಚೆನ್ನಾಗಿ ನೀರು ಕುಡಿಯಿರಿ.

ಜಂಕ್ ಫುಡ್ ಬೇಡ: ಜಂಕ್ ಫುಡ್ ತಿನ್ನುವ ಅಭ್ಯಾಸ ಬಿಟ್ಟುಬಿಡಿ. ಮನೆಯಿಂದ ಬುತ್ತಿ ತರುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿ ಪಾಳಿಯಲ್ಲಿ ಉಪವಾಸ ಇರಬೇಡಿ.

ಸ್ಮಾರ್ಟ್ ಫೋನ್ ಬಳಕೆ ಬೇಡ: ಸ್ಮಾರ್ಟ್ ಫೋನ್ ಅನ್ನು ಹೆಚ್ಚು ಬಳಸಬೇಡಿ.

ಮನೆಯ ವಾತಾವರಣ: ಕಿವಿಗೆ ಹತ್ತಿ ಅಥವಾ ಇಯರ್ ಫೋನ್ ಇಟ್ಟುಕೊಂಡು ಮಲಗುವ ಅಭ್ಯಾಸಮಾಡಿಕೊಳ್ಳಿ.

ದುರಾಭ್ಯಾಸದಿಂದ ದೂರವಿರಿ: ರಾತ್ರಿ ಪಾಳಿಯಲ್ಲಿ ಕೆಲಸಮಾಡುವವರು ಹೆಚ್ಚಾಗಿ ಬೀಡಿ, ಸಿಗರೇಟು, ಗುಟುಕಾ, ತಂಬಾಕು ಸೇವನೆಯ ಅಭ್ಯಾಸ ಮಾಡಿಕೊಳ್ಳುತ್ತಾರೆ. ಇದರಿಂದ ನಿಮ್ಮ ಆರೋಗ್ಯ ಬೇಗ ಹಾಳಾಗುತ್ತದೆ.

ಆಹಾರ ಕ್ರಮಗಳನ್ನು ಬದಲಾಯಿಸಿಕೊಳ್ಳಿ: ರಾತ್ರಿ ಎಂಟು ಗಂಟೆಯ ಹೊತ್ತಿಗೆ ಸರಿಯಾಗಿ ಊಟ ಮಾಡಿ.

ಕೆಲಸದ ಭಂಗಿಗಳು: ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಾಗಿದ್ದರೆ ಪ್ರತಿ ಅರ್ಧ ಗಂಟೆಗೊಮ್ಮೆಯಾದರೂ ನೀವು ಕಂಪ್ಯೂಟರ್ ಪರದೆಯಿಂದ ದೂರಕ್ಕೆ ನೋಡುತ್ತೀರಿ ಬೆನ್ನಿಗೆ ಸರಿಯಾದ ಆಧಾರ ಇರಲಿ ಒಂದು ಗಂಟೆಯ ಕೆಲಸದ ಬಳಿಕ ಒಮ್ಮೆ ಹೊರಗಡೆ ಅಡ್ಡಾಡಿ ಬನ್ನಿ.

ಗಮನಿಸಿ

-ಆದಷ್ಟು ರಾತ್ರಿ ಪಾಳಿ ಕೆಲಸದಿಂದ ದೂರವಿರಿ.

-ದಿನದ 24 ಗಂಟೆಯಲ್ಲಿ ಮೂರು ಬಾರಿ ತೃಪ್ತಿಕರವಾಗಿ ಆಹಾರ(ಊಟ ಅಥವಾ ತಿಂಡಿ) ಸೇವಿಸಿ.

-ಬಾದಾಮಿ, ಮೊಟ್ಟೆ, ತರಕಾರಿ, ಹಣ್ಣು ಇತ್ಯಾದಿಗಳನ್ನು ಹೆಚ್ಚು ಸೇವಿಸಿ. ಸಕ್ಕರೆಯಂಶ ಹೆಚ್ಚಿರುವ ಸಾಫ್ಟ್ ಡ್ರಿಂಕ್ಸ್, ಬೇಕರಿ ತಿನಿಸು ಇತ್ಯಾದಿಗಳನ್ನು ಅವಾಯ್ಡ್ ಮಾಡಿ.

ಆಟ, ವ್ಯಾಯಾಮ ಇತ್ಯಾದಿಗಳಿಗೆ ಪ್ರಾಶಸ್ತ್ಯ ನೀಡಿ. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತ ಇರಿ.

Edited By : Nirmala Aralikatti
PublicNext

PublicNext

22/11/2021 04:07 pm

Cinque Terre

52.37 K

Cinque Terre

1

ಸಂಬಂಧಿತ ಸುದ್ದಿ