ಕರ್ನಲ್(ಹರಿಯಾಣ): ವೈದ್ಯರೊಬ್ಬರು ಹಸುವಿನ ಸಗಣಿ ಸೇವಿಸುವ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡಿದ ಜನ, ಒಬ್ಬ ಡಾಕ್ಟರ್ ಆಗಿ ಇವರು ಯಾಕೆ ಸಗಣಿ ತಿಂತಾರೆ? ಅಂತ ಮಾತಾಡಿಕೊಂಡಿದ್ದರು.
ಆದರೆ ಅದಕ್ಕೆ ಅಸಲಿ ಕಾರಣವನ್ನ ಅವರೇ ಹೇಳಿಕೊಂಡಿದ್ದಾರೆ. ಹರಿಯಾಣದ ಕರ್ನಾಲ್ ನಗರದ ವೈದ್ಯ ಮನೋಜ್ ಮಿತ್ತಲ್ ಅವರು ಎಂಬಿಬಿಎಸ್ ಪದವೀಧರರು. ಹಸುವಿನ ಸಗಣಿಯಲ್ಲಿ ಬಿ ಜೀವಸತ್ವಗಳು ಅಧಿಕ ಪ್ರಮಾಣದಲ್ಲಿವೆ. ಇವು ನಮ್ಮನ್ನು ವಿಕಿರಣದಿಂದ ರಕ್ಷಿಸುತ್ತವೆ. ಮೊಬೈಲ್ ಫೋನ್, ಎ.ಸಿ, ಫ್ರಿಡ್ಜ್, ಹಾಗೂ ಇತರ ವಿದ್ಯುತ್ ಉಪಕರಣಗಳಿಂದ ಹೊರ ಸೂಸುವ ವಿಕಿರಣಗಳು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತವೆ. ಆದ್ರೆ ಸಗಣಿ ಸೇವನೆಯಿಂದ ಈ ರೀತಿ ವಿಕಿರಣಗಳ ಪರಿಣಾಮ ಕಡಿಮೆ ಮಾಡಬಹುದು ಎಂದು ಡಾ. ಮಿತ್ತಲ್ ಹೇಳಿದ್ದಾರೆ.
PublicNext
17/11/2021 10:41 pm