ಮೈಸೂರು: ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನ ಹೊಂದಿದರ ಪರಿಣಾಮ ಯುವ ಸಮುದಾಯದಲ್ಲಿ ಆತಂಕ ಹೆಚ್ಚಾಗುತ್ತ ಇದೆ. ಹೃದಯ ಪರೀಕ್ಷೆ ಮಾಡಿಸಲೆಂದು ಆಸ್ಪತ್ರೆ ಕಡೆ ಜನ ದೌಡಾಯಿಸುತ್ತಿದ್ದಾರೆ.ಹೌದು ಇಂತದೊಂದು ದೃಶ್ಯ ಕಂಡು ಬಂದದ್ದು ನಗರದ ಜಯದೇವ ಆಸ್ಪತ್ರೆಯಲ್ಲಿ.
ಸಾವಿರಾರು ಸಂಖ್ಯೆಯಲ್ಲಿ ಜನ ಪರೀಕ್ಷೆಗೆಂದು ಮುಗಿಬೀಳುತ್ತಿದ್ದು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ಕಳೆದ ೩ ದಿನಗಳಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಿನ ಜನ ಹೃದಯ ಪರೀಕ್ಷೆಗೆಂದು ಆಸ್ಪತ್ರೆ ಕಡೆ ಮುಖ ಮಾಡುತ್ತಿದ್ದಾರೆ.
60 ಮಂದಿ ನೋಡುತ್ತಿದ್ದ ಜಾಗದಲ್ಲಿ 800 ಮಂದಿಯನ್ನು ವೈದ್ಯರು ಪ್ರತಿದಿನ ತಪಾಸಣೆ ಮಾಡುತ್ತಿದ್ದಾರೆ.
ಆತಂಕ ಪಟ್ಟು ಆಸ್ಪತ್ರೆ ಬರಬೇಡಿ.ಇದರಿಂದ ನಿಜವಾಗಿ ಹೃದಯ ಖಾಯಿಲೆ ಇರುವವರಿಗೆ ಚಿಕಿತ್ಸೆ ಮಾಡಲು ತೊಂದರೆ ಆಗುತ್ತಿದೆ.
ಸದ್ಯ ಬರುತ್ತಿರುವ ಶೇ 90 ರಷ್ಟು ಜನರಲ್ಲಿ ಯಾವುದೇ ಸಮಸ್ಯೆ ಇಲ್ಲ.ಭಯ ಪಟ್ಟು ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡ ಮಾತ್ರಕ್ಕೆ ಹೃದಯ ಖಾಯಿಲೆ ಇದೆ ಎಂಬ ಆತಂಕ ಬೇಡ, ನಿಯಮಿತ ವ್ಯಾಯಾಮ, ಉತ್ತಮ ಆಹಾರ ಕ್ರಮ ರೂಡಿಸಿಕೊಳ್ಳಿ ಯಾರು ಆತಂಕಪಡುವ ಅಗತ್ಯ ಇಲ್ಲ ಅನಾವಶ್ಯಕವಾಗಿ ವೈದ್ಯರ ಮತ್ತು ಸಿಬ್ಬಂದಿಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ,ಆತಂಕಪಡುವ ಅಗತ್ಯ ಇಲ್ಲ ಎಂದಿದ್ದಾರೆ.
PublicNext
01/11/2021 03:41 pm