ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು : ಮನುಷ್ಯನ ದೇಹಕ್ಕೆ ಹಂದಿ ಕಿಡ್ನಿ ಯಶಸ್ವಿ ಕಸಿ...!

ವಾಷಿಂಗ್ಟನ್: ಪ್ರಸ್ತುತ ಜಮಾನದಲ್ಲಿ ಮನುಷ್ಯನಿಗೆ ಹೋದ ಜೀವವನ್ನು ಮರಳಿಸುವುದನ್ನು ಬಿಟ್ಟಿರೆ ಮತಾವುದು ಅಸಾಧ್ಯವಿಲ್ಲ ಎನ್ನುವಂತಿದೆ. ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಾಗುವ ಬದಲಾವಣೆಗಳು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತವೆ.

ಸದ್ಯ ವೈದ್ಯಕೀಯ ಲೋಕದಲ್ಲಿ ಮಹತ್ತರ ಮೈಲುಗಲ್ಲೊಂದು ಸ್ಥಾಪನೆಯಾಗಿದೆ. ಹೌದು ನ್ಯೂಯಾರ್ಕ್ ನಗರದ ಎನ್ ವೈಯು ಲ್ಯಾಂಗೋನ್ ಹೆಲ್ತ್ ಕೇರ್ ಸೆಂಟರ್ ನ ಸರ್ಜನ್ ಗಳು ಮೆದುಳು ನಿಷ್ಕ್ರಿಯವಾಗಿದ್ದ ಮಹಿಳೆಯ ಕಿಡ್ನಿಯನ್ನು ತೆಗೆದು ಹಂದಿಯ ಕಿಡ್ನಿಯನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಮನುಷ್ಯನ ದೇಹದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಹಂದಿಯ ಕಿಡ್ನಿಯನ್ನು ಅಳವಡಿಸಿದ ನಂತರ ಆಕೆಯ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಕಂಡುಬಂದವು ಎಂಬುದನ್ನು ಪರೀಕ್ಷಿಸಲಾಗಿದೆ. ಹಂದಿಯ ಕಿಡ್ನಿ ಜೋಡಣೆ ಮಾಡಿದ್ದರಿಂದ ಆ ರೋಗಿಯ ದೇಹದಲ್ಲಿ ಹೆಚ್ಚೇನೂ ಬದಲಾವಣೆ ಕಂಡುಬಂದಿಲ್ಲವಾದ್ದರಿಂದ ಈ ಪ್ರಯೋಗ ಯಶಸ್ವಿಯಾಗಿದೆ ಎಂದೇ ಹೇಳಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಅಂದಹಾಗೆ ಈ ಕಸಿ ಚಿಕಿತ್ಸೆಗೆ ಒಳಗಾದ ಮಹಿಳೆಯ ಮೆದುಳು ನಿಷ್ಕ್ರಿಯಗೊಂಡ ರೋಗಿಯಾಗಿದ್ದಳು ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಗೆ ವೆಂಟಿಲೇಟರ್ ನ್ನು ತೆಗೆಯುವ ಮುನ್ನ ಈ ಪ್ರಯೋಗವನ್ನು ಮಾಡಲು ಕುಟುಂಬಸ್ಥರು ಒಪ್ಪಿಗೆ ನೀಡಿದ್ದರು.

Edited By : Nirmala Aralikatti
PublicNext

PublicNext

20/10/2021 06:21 pm

Cinque Terre

58.66 K

Cinque Terre

6