ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ತನ ಕ್ಯಾನ್ಸರ್ ತಡೆಗೆ, ಸ್ತನದ ಆರೈಕೆ ಅವಶ್ಯಕ..

ಇಂದಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಕಾಡುತ್ತಿದೆ. ಸ್ತನದ ಸರಿಯಾದ ಆರೈಕೆಯಿಂದ ಕ್ಯಾನ್ಸರ್ ನ್ನು ದೂರವಿಡಬಹುದು.

ನಿಯಮಿತ ವ್ಯಾಯಾಮ: ನಿಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆಯನ್ನು ಸೇರಿಸಿಕೊಳ್ಳುವುದು ನಿಮ್ಮನ್ನು ಆರೋಗ್ಯವಾಗಿಡಲು ಉತ್ತಮ ಮಾರ್ಗವಾಗಿದೆ. ಈ ದೈಹಿಕ ಚಟುವಟಿಕೆಯು ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಜೊತೆಗೆ ನೀವು ಎದುರಿಸುತ್ತಿರುವ ಒತ್ತಡವನ್ನು ಬಿಡುಗಡೆ ಮಾಡುತ್ತದೆ. ದೈಹಿಕ ವ್ಯಾಯಾಮಗಳು ಬ್ಯಾಸ್ಕೆಟ್ ಬಾಲ್, ವಾಲಿಬಾಲ್, ಈಜುವುದು, ಟೆನಿಸ್ ಮತ್ತು ಮುಂತಾದ ಕ್ರೀಡಾ ಚಟುವಟಿಕೆಗಳು ಒಳ್ಳೆಯದು.

ಸ್ತನಗಳನ್ನು ಮಸಾಜ್ ಮಾಡಿ: ನಿಮ್ಮ ಕಾಲುಗಳು ಮತ್ತು ತೋಳುಗಳಂತೆ ಸ್ತನಗಳನ್ನು ನಿಯಮಿತವಾಗಿ ಮಸಾಜ್ ಮಾಡಿ. ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ತನಗಳು ಬಹಳಷ್ಟು ದುಗ್ಧರಸ ಗ್ರಂಥಿಗಳನ್ನು ಹೊಂದಿದ್ದು, ಮಸಾಜ್ ಮಾಡಿದಾಗ ದುಗ್ಧರಸ ಎಂಬ ದ್ರವವನ್ನು ಬಿಡುಗಡೆ ಮಾಡುತ್ತವೆ. ಇವು ಸ್ತನ ಕ್ಯಾನ್ಸರ್ ಬೆಳವಣಿಗೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಮಸಾಜ್ ಮಾಡುವುದು ಅಗತ್ಯ.

ಆರೋಗ್ಯಕರ ಆಹಾರ ತಿನ್ನುವುದು: ಸಲಾಡ್, ಹಣ್ಣು-ತರಕಾರಿ ಬಳಕೆ ಹೆಚ್ಚು ಮಾಡಿ. ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ವಿಟಮಿನ್ ಡಿ ಕೂಡ ಅತ್ಯಗತ್ಯ. ಸ್ತನ ಕ್ಯಾನ್ಸರ್ ಪತ್ತೆಯಾದ ನಂತರ ಉತ್ತಮ ಮಟ್ಟದ ವಿಟಮಿನ್ ಡಿ ಪೋಷಕಾಂಶ ನಿಮಗೆ ಬದುಕಲು ಸಹಾಯ ಮಾಡುತ್ತದೆ.

ವೈದ್ಯರನ್ನು ಭೇಟಿ ಮಾಡಿ: ಮಹಿಳೆಯರು 40-50 ವರ್ಷದೊಳಗಿದ್ದರೆ, ವರ್ಷಕ್ಕೊಮ್ಮೆಯಾದರೂ ಸ್ತನ ಪರೀಕ್ಷೆಗಾಗಿ ವೈದ್ಯರ ಬಳಿ ಹೋಗಬೇಕು, ಪರಿಗಣಿಸಬೇಕು. 50 ವರ್ಷಕ್ಕಿಂತ ಮೇಲ್ಪಟ್ಟವಳಾಗಿದ್ದರೆ, 2 ವರ್ಷಕ್ಕೊಮ್ಮೆ ಸರಿ.

ಸ್ತನ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳು ಹೀಗಿವೆ: ಎದೆಯಲ್ಲಿ ಒಂದು ರೀತಿಯ ಗಡ್ಡೆ ಎದೆಯ ಭಾಗ ಅಥವಾ ಕಂಕುಳಡಿಯಡಿಯಲ್ಲಿ ಊತ ಜೋತುಬಿದ್ದಿರುವ ಅಥವಾ ತಲೆಕೆಳಗಾದ ಮೊಲೆತೊಟ್ಟು ಮೊಲೆತೊಟ್ಟಿನಲ್ಲಿ ನಿರಂತರವಾದ ದದ್ದು ಮೊಲೆತೊಟ್ಟುಗಳಲ್ಲಿ ರಕ್ತ ವಿಸರ್ಜನೆ ಸ್ತನದ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ ಇವುಗಳಲ್ಲಿ ನಿಮ್ಮಲ್ಲಿ ಯಾವುದಾದರೂ ಲಕ್ಷಣಗಳು ಕಂಡುಬಂದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

Edited By : Nirmala Aralikatti
PublicNext

PublicNext

11/10/2021 05:26 pm

Cinque Terre

29.36 K

Cinque Terre

0