ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಖದ ಮೇಲಿದ್ದ 8 ಕೆಜಿ ಗಡ್ಡೆ : ವ್ಯದ್ಯರ ಯಶಸ್ವಿ ಶಸ್ತ್ರ ಚಿಕಿತ್ಸೆ

ಬೆಂಗಳೂರು: ಮುಖದ ಮೇಲೆ ಬೆಳೆದಿದ್ದ ಸುಮಾರು 8 ಕೆಜಿಯ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಬೆಂಗಳೂರಿನ ವೈದ್ಯರು ಯಶಸ್ವಿಯಾಗಿದ್ದಾರೆ. ಹೌದು ಓಡಿಶಾ ಮೂಲಕ 31 ವರ್ಷದ ವ್ಯಕ್ತಿಯೊಬ್ಬರ ಮುಖದಲ್ಲಿ ಬೆಳೆದಿದ್ದ ಈ ಗೆಡ್ಡೆಯನ್ನು ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರು ತೆಗೆದಿದ್ದಾರೆ.

ಕಳೆದ 17 ವರ್ಷಗಳಿಂದ ಈ ಗೆಡ್ಡೆಯು ನಿರಂತರವಾಗಿ ಬೆಳವಣಿಗೆ ಹೊಂದಿದೆ. ಹಾನಿಕಾರಕವಲ್ಲದ ಈ ಗಡ್ಡೆಯನ್ನು ವೈದ್ಯರು 'ಪ್ಲೆಕ್ಸಿಫಾರ್ಮ್ ನ್ಯೂರೋಫೈಬ್ರೊಮಾ' ಎಂದು ಕರೆದಿದ್ದಾರೆ. ಮುಖದ ಬಲಭಾಗದಲ್ಲಿ ಇದು ಜೋತಾಡುತ್ತಿದ್ದರಿಂದ ದೈನಂದಿನ ಜೀವನಕ್ಕೆ ಸಮಸ್ಯೆಯಾಗಿತ್ತು. ಆರು ತಿಂಗಳ ಅವಧಿಯಲ್ಲಿ 16 ವಿವಿಧ ಶಸ್ತ್ರಚಿಕಿತ್ಸಾ ವಿಧಾನಗಳ ಮೂಲಕ ಗೆಡ್ಡೆಯನ್ನು ತೆಗೆಯಲಾಗಿದೆ.

ಕ್ರೌಡ್ ಫಂಡಿಂಗ್ ಮೂಲಕ ಈ ಶಸ್ತ್ರಚಿಕಿತ್ಸೆ ಸಾಕಾರವಾಯಿತು ಎಂದು ಆಸ್ಪತ್ರೆ ತಿಳಿಸಿದೆ.

'ವ್ಯಕ್ತಿಯ ತಲೆಯಿಂದ ಕುತ್ತಿಗೆವರೆಗೆ ಗೆಡ್ಡೆ ಆವರಿಸಿಕೊಂಡಿತ್ತು. ತಪಾಸಣೆ ನಡೆಸಿದ ಬಳಿಕ ಇದು ನಿಷ್ಕ್ರಿಯಗೊಂಡಿದೆ ಎಂದು ಪರಿಗಣಿಸಲಾಯಿತು. ಸಿಟಿ ಸ್ಕ್ಯಾನ್ ನಡೆಸಿದಾಗ ಮುಖದ ಮೂಳೆಗಳು ನಾಶವಾಗಿರುವುದು ದೃಢಪಟ್ಟಿತು. ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳ ನೆರವಿನಿಂದ ರಕ್ತಸ್ರಾವವನ್ನು ತಡೆದು, ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು' ಎಂದು ಆಸ್ಪತ್ರೆಯ ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ರವಿ ಗೋಪಾಲ್ ವರ್ಮಾ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

01/10/2021 07:49 pm

Cinque Terre

31.67 K

Cinque Terre

3