ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಜನ ಸುರಕ್ಷೆಯೇ ನಮ್ಮ ಧ್ಯೇಯ...": ಲಸಿಕೆ ಹಾಕಲು ಉಕ್ಕಿ ಹರಿಯುವ ನದಿನೀರು ದಾಟಿ ಬಂದರು!

ದೇಶಾದ್ಯಂತ ಇಂದು ಲಕ್ಷಾಂತರ ಸಂಖ್ಯೆಯಲ್ಲಿ ಆರೋಗ್ಯ ಸಿಬ್ಬಂದಿ, ಕೋವಿಡ್ ಲಸಿಕೆಯನ್ನು ಜನರಿಗೆ ನೀಡಲು ಊರು- ಕೇರಿ ಅಲೆದಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಭಾರತೀಯರೆಲ್ಲರೂ ಮಹಾಮಾರಿ ಕೊರೊನಾದಿಂದ ಸುರಕ್ಷಿತವಾಗಿರಲು ಈ ಮುಂಚೂಣಿ ಕೋವಿಡ್ ವಾರಿಯರ್ಸ್ ಪಡುತ್ತಿರುವ ಪರಿಶ್ರಮ- ಹರಸಾಹಸವನ್ನು ನಾವೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುತ್ತೇವೆ.

ಯಾವುದೋ ವಸ್ತು ಮಾರುವ ಸಾಮಾನ್ಯ ವ್ಯಾಪಾರಿಗಳಂತೆ ಹಾದಿ- ಬೀದಿಗಳಲ್ಲಿ ದೊಡ್ಡ ಸ್ವರದಲ್ಲಿ "ಕೊರೊನಾ ಲಸಿಕೆ ಪಡೆಯದವರು ಬನ್ನಿ... ಫಸ್ಟ್ ಡೋಸ್, ಸೆಕೆಂಡ್ ಡೋಸ್ ನಮ್ಮಲ್ಲಿ ಲಭ್ಯವಿದೆ" ಎಂದು ಹೇಳುತ್ತಾ ಪ್ರತಿ ನಾಗರಿಕರನ್ನು ಜಾಗೃತಗೊಳಿಸುವ, ವಿನಂತಿಸುವ ಪರಿ ನಿಜಕ್ಕೂ ಗಮನೀಯ, ಶ್ಲಾಘನಾರ್ಹ.

ಈ ವೈರಲ್ ವೀಡಿಯೊದಲ್ಲಿ ಕೋವಿಡ್ ವ್ಯಾಕ್ಸಿನೇಶನ್ ಗಾಗಿ ಗ್ರಾಮ- ಕುಗ್ರಾಮ ಸುತ್ತುತ್ತಿರುವ ಆರೋಗ್ಯ ಕಾರ್ಯಕರ್ತರ ತಂಡವೊಂದು ರಭಸವಾಗಿ ಹರಿದು ಹೋಗುತ್ತಿರುವ ನದಿನೀರಿನ ಕೊರಕಲು ತಾಣವನ್ನು ಕಾಲ್ನಡಿಗೆಯಲ್ಲೇ ದಾಟುತ್ತಿರುವ ರೋಮಾಂಚಕಾರಿ, ಅಪಾಯಕಾರಿ ಸನ್ನಿವೇಶ ಮನ ತಟ್ಟುತ್ತದೆ. ಈ ಸಂದರ್ಭ ಸ್ವಲ್ಪವೇ ಯಾಮಾರಿದರೂ ಅಪಾಯ ಖಚಿತ ಎಂಬ ಚಿತ್ರಣ ತಲ್ಲಣ ಹುಟ್ಟಿಸುತ್ತದೆ! ಜತೆಗೆ ಸಿಬ್ಬಂದಿಯ ಕರ್ತವ್ಯ ಪರತೆಗೆ ಅಚ್ಚರಿ- ಮೆಚ್ಚುಗೆ ಮೂಡುತ್ತದೆ.

Edited By : Nagesh Gaonkar
PublicNext

PublicNext

01/10/2021 04:10 pm

Cinque Terre

88.73 K

Cinque Terre

6