ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಕೊರೊನಾ ಲಸಿಕೆ ಪಡೆದುಕೊಳ್ಳಿ": ಮನೆಯಂಗಳಕ್ಕೇ ಬಂದರು ವೈದ್ಯರು, ದಾದಿಯರು!

ಆಂಧ್ರಪ್ರದೇಶ: ನಮ್ಮ ದೇಶದಲ್ಲಿ ಕೊರೊನಾ ಹಾವಳಿ ತಡೆಗಟ್ಟಲು ಆಯಾಯ ಸ್ಥಳೀಯಾಡಳಿತಗಳ ಸಹಿತ ರಾಜ್ಯ ಸರಕಾರಗಳು ಹಾಗೂ ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಕಾರ್ಯ ನಿರತವಾಗಿವೆ.

ರಾಷ್ಟ್ರದ ಲಕ್ಷಾಂತರ ಆರೋಗ್ಯ ಕೇಂದ್ರಗಳಲ್ಲಿ ಕೋಟಿಗಟ್ಟಲೆ ಕೋವಿಡ್ ಲಸಿಕೆಗಳು ಬೇಡಿಕೆ, ಆದ್ಯತೆಗೆ ಅನುಸಾರವಾಗಿ ವಿತರಿಸಲ್ಪಡುತ್ತಿವೆ. ಆರೋಗ್ಯ ಕಾರ್ಯಕರ್ತರು, ವೈದ್ಯರು, ಅಧಿಕಾರಿಗಳು ಮತ್ತಿತರ ಸಿಬ್ಬಂದಿ ಹಗಲಿರುಳು ದುಡಿಯುತ್ತಾ ಜನರನ್ನು ಕೊರೊನಾದಿಂದ ಸಂರಕ್ಷಿಸಲು ತಮ್ಮ ಪ್ರಾಣವನ್ನೇ ಪಣವಾಗಿರಿಸಿದ್ದಾರೆ.

ಈ ವೀಡಿಯೊದಲ್ಲಿ ಕೋವಿಡ್ ಲಸಿಕೆ ನೀಡಲು ಮನೆ- ಮನೆ ಬಾಗಿಲಿಗೆ ಕೊರೊನಾ ವಾರಿಯರ್ಸ್ ಖುದ್ದಾಗಿ ಆಗಮಿಸಿ, ಲಸಿಕೆಯ ಮೊದಲ ಡೋಸ್ ಮತ್ತು ಎರಡನೇ ಡೋಸ್ ಸ್ಥಳದಲ್ಲೇ ಪಡೆಯಲು ಕಳಕಳಿಯಿಂದ ವಿನಂತಿಸುತ್ತಿದ್ದಾರೆ, ಮನವೊಲಿಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

22/09/2021 06:04 pm

Cinque Terre

56.09 K

Cinque Terre

0