ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವರ ನಾಡಲ್ಲಿ 'ನಿಫಾ' ಅಟ್ಟಹಾಸ: ಬಾವಲಿ, ಮೇಕೆಯ ಮಾದರಿ ಸಂಗ್ರಹ

ತಿರುವನಂತಪುರಂ: ಕೊರೊನಾ ಸೋಂಕಿನ ಜೊತೆ ಕೇರಳದಲ್ಲಿ ನಿಫಾ ಆತಂಕ ಸೃಷ್ಟಿಸಿದೆ. ನಿಫಾ ಸೋಂಕಿಗೆ ತುತ್ತಾಗಿದ್ದ ಬಾಲಕನ 11 ಮಂದಿ ಕುಟುಂಬಸ್ಥರಿಗೂ ನಿಫಾ ದಾಳಿ ಇಟ್ಟಿದೆ.

ಕೇರಳದ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಚಾತಮಂಗಲಂನ ಪಾಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡುಬಂದ ಬಾವಲಿಗಳ ದೇಹದ ದ್ರವಗಳನ್ನು ಸಂಗ್ರಹಿಸಿದ್ದಾರೆ. ಈ ಮೂಲಕ ಅಧಿಕಾರಿಗಳು ನಿಫಾ ವೈರಸ್ ಮೂಲ ಏನೆಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಬಾಲಕನ ಮನೆಯಲ್ಲಿದ್ದ ಮೇಕೆಯ ರಕ್ತ ಮತ್ತು ಜೊಲ್ಲನ್ನು ಸಂಗ್ರಹಿಸಿ ಭೋಪಾಲ್​ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಕೆ.ಕೆ ಬೇಬಿ ನೇತೃತ್ವದ ತಂಡವು ಸೋಂಕಿನ ಮೂಲವನ್ನು ಗುರುತಿಸಲು ಪ್ರಯತ್ನಿಸುತ್ತಿದೆ. ಮಾರಣಾಂತಿಕ ನಿಫಾ ವೈರಸ್ ಇದೆಯೇ ಎಂದು ಪರೀಕ್ಷಿಸಲು ಬಾವಲಿ ಮತ್ತು ಮೇಕೆಗಳ ಮಾದರಿಗಳನ್ನು ಭೋಪಾಲ್‌ಗೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.

ಹಂದಿಗಳು ನಿಫಾ ಸೋಂಕಿನ ದ್ವಿತೀಯ ಮೂಲವಾಗಿದೆ. ಏಕೆಂದರೆ ಅವುಗಳು ಸಾಮಾನ್ಯವಾಗಿ ಬಾವಲಿಗಳು ತಿನ್ನುವ ಕಾಡು ಹಣ್ಣುಗಳನ್ನು ತಿನ್ನುತ್ತವೆ. ಆದ್ದರಿಂದ ಈ ಪ್ರದೇಶದಲ್ಲಿ ಕಾಡುಹಂದಿಗಳು ಇರುವುದನ್ನು ಪರೀಕ್ಷಿಸಲು ಪಶುಸಂಗೋಪನಾ ಇಲಾಖೆಯು ಅರಣ್ಯ ಇಲಾಖೆಯೊಂದಿಗೆ ಸಮಾಲೋಚಿಸುತ್ತಿದೆ.

ದಕ್ಷಿಣ ಭಾರತದಲ್ಲಿ ಮೊದಲ ನಿಫಾ ವೈರಸ್ ರೋಗ (ಎನ್ಐವಿ) ಮೇ 19, 2018 ರಂದು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ವರದಿಯಾಗಿತ್ತು. 2018ರ ಜೂನ್ 1 ರವರೆಗೆ ರಾಜ್ಯದಲ್ಲಿ 17 ಸಾವುಗಳಿಗೆ ಮತ್ತು 18 ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದವು. ಕೇರಳ ಅತೀ ಸಾಹಸಿಕವಾಗಿ ನಿಫಾವನ್ನು ಮೆಟ್ಟಿ ನಿಂತಿತ್ತು.

Edited By : Vijay Kumar
PublicNext

PublicNext

07/09/2021 09:04 am

Cinque Terre

52.83 K

Cinque Terre

0

ಸಂಬಂಧಿತ ಸುದ್ದಿ