ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳದಲ್ಲಿ ಮತ್ತೆ ನಿಫಾ ವೈರಸ್‌: ಬಾಲಕ ಸಾವು- 188 ಜನರಿಗೆ ಸಂಕಷ್ಟ.!

ತಿರುವನಂತಪುರಂ: ಕೇರಳದಲ್ಲಿ ಹೆಮ್ಮಾರಿ ನಿಫಾ ವೈರಸ್ ಸೋಂಕಿಗೆ 12 ವರ್ಷ ವಯಸ್ಸಿನ ಬಾಲಕ ಮೃತಪಟ್ಟಿರುವುದನ್ನು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಇಂದು ದೃಢಪಡಿಸಿದ್ದಾರೆ.

ಕೋಯಿಕ್ಕಾಡ್‌ನ ಬಾಲಕನ ಸ್ಯಾಂಪಲ್‌ಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಇನ್ಸ್ಟಿಟ್ಯೂಟ್ ಗೆ ಕಳಿಸಲಾಗಿತ್ತು. ಕೇಂದ್ರದ ರೋಗ ನಿಯಂತ್ರಕ ತಂಡವೊಂದು ಭಾನುವಾರ ತಲುಪಲಿದ್ದು, ತಾಂತ್ರಿಕ ಸಲಹೆ ನೀಡಲಿದೆ. ನಿಫಾ ವೈರಸ್‌ನಿಂದ ಮೃತಪಟ್ಟ ಬಾಲಕನ ಸಂಪರ್ಕದಲ್ಲಿದ್ದ ಇಬ್ಬರು ಆರೋಗ್ಯ ಸಿಬ್ಬಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಮೃತ ಬಾಲಕನ ಸಂಪರ್ಕದಲ್ಲಿದ್ದ 188 ಜನರನ್ನು ಗುರುತಿಸಲಾಗಿದೆ. ಅದರಲ್ಲಿ 20 ಜನರು ಅಪಾಯದಲ್ಲಿರುವ ಸಾಧ್ಯತೆ ಇದೆ ಎಂದು ಕಣ್ಗಾವಲು ತಂಡ ಗುರುತಿಸಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

05/09/2021 05:21 pm

Cinque Terre

73.47 K

Cinque Terre

6