ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮಗೆ ಗೊತ್ತೇ.. ಅಳುವುದು ಒಳ್ಳೆಯದು!

ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕಾರಣದಿಂದ ಕಣ್ಣೀರು ಬರುತ್ತವೆ. ಮನಸ್ಸಿನ ಭಾವನೆಗಳಿಂದ ಹೊರ ಬರುವ ಕಣ್ಣೀರಿನಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

ಮನಸ್ಸಿಗೆ ನೋವಾದಾಗ ಅಳುವುದು ಸಹಜ. ಕೆಲವು ಬಾರಿ ಮನಸ್ಸಿಗೆ ತುಂಬಾ ಖುಷಿಯಾದಾಗಲೂ ಕಣ್ಣಿನಲ್ಲಿ ನೀರು ಬರುತ್ತದೆ. ಬಾಯ್ತುಂಬ ನಕ್ಕು ನಕ್ಕು ಸುಸ್ತಾದಾಗಲೂ ಆನಂದಭಾಷ್ಪ ಬರುತ್ತದೆ.

ಕಣ್ಣಿರಿನಿಂದ ಮನಸ್ಸು ಶಾಂತಗೊಳ್ಳುತ್ತದೆ. ಕೆಟ್ಟ ಯೋಚನೆಗಳಿಂದ ಬರಬಹುದು. ಮನಸ್ಸು ಶಾಂತಿಯಿಂದಿರಲು ಸಹಾಯ ಮಾಡುತ್ತದೆ. ನೋವಾದಾಗ ಮನಸ್ಸನ್ನು ಹಿಡಿತದಲ್ಲಿಟ್ಟು ಕೊಳ್ಳುವುದಕ್ಕಿಂತ ಸಮಾಧಾನವಾಗುವಷ್ಟು ಕಣ್ಣೀರನ್ನು ಹೊರ ಹಾಕುವುದು ಒಳ್ಳೆಯದು.

ಮಾನಸಿಕ ಒತ್ತಡದಿಂದ ಮುಕ್ತರಾಗಬಹುದು

ಕೆಲವು ಭಾವನೆಗಳು ಕಣ್ಣಿನಲ್ಲಿ ನೀರು ತರಿಸುತ್ತದೆ. ಅಳುವುದರಿಂದ ಒತ್ತಡವನ್ನು ದೂರ ಮಾಡಿಕೊಳ್ಳಬಹುದಾಗಿದೆ. ದೇಹದಲ್ಲಿನ ಕೆಲವು ವಿಷಕಾರಿ ಅಂಶಗಳು ಕಣ್ಣೀರಿನ ಮೂಲಕ ಹೊರಬರುತ್ತದೆ ಎಂಬುದು ಸಂಶೋಧನೆಯ ಮೂಲಕ ತಿಳಿದು ಬಂದಿದೆ.

ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ

ಕಣ್ಣೀರು ಲೈಸೋಜೈಮ್ ಎಂಬ ಕಿಣ್ವವನ್ನು ಹೊಂದಿರುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅಳುವಿನಿಂದ ಕಣ್ಣುಗಳು ತೇವಗೊಳ್ಳುತ್ತವೆ, ಕಣ್ಣು ಕೆಂಪಾಗುವುದು ಮತ್ತು ತುರಿಕೆಯ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತದೆ.

ಹಾರ್ಮೋನುಗಳ ಉತ್ಪತ್ತಿ

ಅಳುವಾಗ ದೇಹದಲ್ಲಿ ಅನೆಕ ರೀತಿಯ ಹಾರ್ಮೋನುಗಳು ಉತ್ಪತ್ತಿಯಾಗುತ್ತದೆ. ಇದು ನಿಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಖಿನ್ನತೆಯನ್ನು ದೂರವಾಗಿಸಲು ನೋವಾದಾಗ ಅಳುವುದು ಉತ್ತಮ.

Edited By : Nirmala Aralikatti
PublicNext

PublicNext

19/08/2021 02:35 pm

Cinque Terre

25.8 K

Cinque Terre

0