ಫೈಬರ್ ನಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಆಹಾರ ಕ್ರಮದಲ್ಲಿ ಫೈಬರನ್ನು ಸೇರಿಸಿಕೊಳ್ಳುವುದು ಅತೀ ಮುಖ್ಯ..
ಫೈಬರ್ ಅಂದರೇನು? ಅದು ಸಸ್ಯ ಆಧಾರಿತ ಆಹಾರದ ಒಂದು ಭಾಗವಾಗಿದ್ದು, ಮಾನವ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಕಿಣ್ವಗಳಿಂದ ಸುಲಭವಾಗಿ ವಿಭಜನೆ ಆಗುವುದಿಲ್ಲ. ಅದು ದೇಹದಲ್ಲಿ ಅನಗತ್ಯ ಆಹಾರ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ.
ಫೈಬರ್ ಯುಕ್ತ ಆಹಾರಗಳು ಮಲಬದ್ಧತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ 7 ಫೈಬರ್ ಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಬಹುದು.
1) ಬಾಳೆ ಹಣ್ಣು
ಬಾಳೆ ಹಣ್ಣಿನಲ್ಲಿ ಅತ್ಯಧಿಕ ಫೈಬರ್ ಇದ್ದು, ಅದು ಮಲಬದ್ಧತೆ ದೂರ ಮಾಡುತ್ತದೆ. ಪೊಟ್ಯಾಶಿಯಂ ಮತ್ತು ಕಬ್ಬಿಣಾಂಶ ಕೂಡ ಅಧಿಕ ಪ್ರಮಾಣದಲ್ಲಿ ಹೊಂದಿದೆ.
2) ಓಟ್ಸ್
ಓಟ್ಸ್ ಅನ್ನು ಫೈಬರ್ ನ ಅತ್ಯುತ್ತಮ ಮೂಲಗಳಲ್ಲಿ ಒಂದು ನಮ್ಮ ಆಹಾರ ಕ್ರಮದಲ್ಲಿ ಉಪ್ಪಿಟ್ಟು, ಪಾಯಸ, ದೋಸೆ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಬಳಸಬಹುದು.
3) ಬೇಳೆ ಕಾಳುಗಳು
ಬೇಳೆ ಕಾಳುಗಳಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ಡಯೆಟರಿ ಫೈಬರ್ ಮತ್ತು ಕಾರ್ಬ್ ಗಳು ದಿನವಿಡೀ ನಿಮ್ಮ ಚೈತನ್ಯದ ಮಟ್ಟವನ್ನು ಹೆಚ್ಚಿಸಿ, ಚಟುವಟಿಕೆಯಿಂದಿರುವಂತೆ ಮಾಡುತ್ತದೆ.
4) ಅಗಸೆ ಬೀಜಗಳು
ಅಗಸೆ ಬೀಜಗಳಲ್ಲಿ ತುಂಬಾ ಪ್ರೋಟೀನ್ ಮತ್ತು ಫೈಬರ್ ಇರುತ್ತದೆ. ಅವು ವಯಸ್ಕರಲ್ಲಿ ಮತ್ತು ಮಧುಮೇಹಿಗಳಲ್ಲಿ ಕರುಳಿನ ಪ್ರಕಿಯೆಗಳನ್ನು ಸುಧಾರಿಸುತ್ತದೆ.
5) ಸೇಬು ಮತ್ತು ಪಿಯರ್ಸ್
ಸೇಬು ಮತ್ತು ಪಿಯರ್ಸ್ ಗಳನ್ನು ಸಿಪ್ಪೆ ಸಮೇತ ತಿಂದರೆ ಹೆಚ್ಚು ಫೈಬರ್ ಸೇವಿಸಿದಂತಾಗುವುದು. ಏಕೆಂದರೆ ಆ ಹಣ್ಣುಗಳಿಗಿಂತ ಅವುಗಳು ಸಿಪ್ಪೆಯಲ್ಲೇ ಜಾಸ್ತಿ ಫೈಬರ್ ಇರುತ್ತದೆ.
6) ಬ್ರೊಕೋಲಿ
ಬ್ರೊಕೋಲಿಯಲ್ಲಿ ಅತ್ಯಧಿಕ ವಿಟಮಿನ್ ಮತ್ತು ಡಯೆಟರಿ ಫೈಬರ್ ಇರುತ್ತದೆ. ಕೊಂಚ ಎಣ್ಣೆ ಮತ್ತು ಬೆಳ್ಳುಳ್ಳಿ ಹಾಕಿ ಬ್ರೊಕೋಲಿಯನ್ನು ಹದವಾಗಿ ಹುರಿದು/ಬಾಡಿಸಿ ತಿಂದರೂ ರುಚಿಕರ.
7) ಡ್ರೈ ಫ್ರೂಟ್ಸ್
ಬಾದಾಮಿ ಬೀಜದಿಂದ ಹಿಡಿದು ಗೋಡಂಬಿ ಮತ್ತು ವಾಲ್ ನಟ್ ಬೀಜಗಳವರೆಗೆ ಎಲ್ಲಾ ರೀತಿಯ ಒಣ ಬೀಜಗಳು ಫೈಬರ್ ನ ಆಗರವಾಗಿದೆ.
PublicNext
09/08/2021 12:17 pm