ಚಿಕನ್ ನಿಮ್ಮ ದೇಹಕ್ಕೆ ಬೇಕಾಗಿರುವ ಹಲವು ಪೋಷಕಾಂಶಗಳನ್ನು ನೀಡುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವ ಮಾತು ತಿಳಿದಿರಲಿ. ನಿತ್ಯವೂ ಚಿಕನ್ ಸೇವಿಸುವುದು ಆರೋಗ್ಯದ ಮೇಲೆ ಕೆಲವು ಅಡ್ಡ ಪರಿಣಾಮವನ್ನುಂಟು ಮಾಡುತ್ತವೆ.
ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ
ಚಿಕನ್ ಪ್ರೋಟೀನ ಒಂದು ಅತ್ಯುತ್ತಮ ಮೂಲವಾಗಿರುವುದು ಎಷ್ಟು ಸತ್ಯವೋ ದಿನನಿತ್ಯದಲ್ಲಿ ಸೇವಿಸುವುದರಿಂದ ನಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಆದರೆ ಇದನ್ನು ನೀವು ಹೇಗೆ ಸೇವಿಸುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.
ನೀವು ಯಾವಾಗಲೂ ಡೀಪ್ ಫ್ರೈಡ್ ಮಾಡಿರುವ ಚಿಕನ್ನ ಸೇರಿಸುತ್ತಿದ್ದರೆ, ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಅಂದರೆ ಈ ರೀತಿಯ ಚಿಕನ್ ತಯಾರಿಸಲು ಹೆಚ್ಚಿನ ಆರೋಗ್ಯಕ್ಕೆ ಹಾನಿಯಾಗುವಂತಹ ವಸ್ತುಗಳನ್ನು ಬಳಸಿರುತ್ತಾರೆ.
ಹೆಚ್ಚಿನ ಶಾಖದ ಆಹಾರ
ಚಿಕನನ್ನು ಹೆಚ್ಚಿನ ಶಾಖದ ಆಹಾರವೆಂದು ಕರೆಯಲಾಗುತ್ತದೆ. ಇದು ನಿಮ್ಮ ದೇಹದ ಒಟ್ಟಾರೆ ತಾಪಮಾನವನ್ನು ಹೆಚ್ಚಿಸುತ್ತದೆ. ಸರಳವಾಗಿ ಹೇಳುವುದಾದರೆ, ಇದು ದೇಹದಲ್ಲಿ ಶಾಖವನ್ನು ಉಂಟು ಮಾಡಬಹುದು.
ತೂಕ ಹೆಚ್ಚಾಗುವುದು
ನಿಯಮಿತವಾಗಿ ಚಿಕನ್ ತಿನ್ನುವುದರಿಂದ ಆಗುವ ಮತ್ತೊಂದು ಅಡ್ಡಪರಿಣಾಮವೆಂದರೆ ನಿಮ್ಮ ತೂಕ ಹೆಚ್ಚಾಗುವುದು. ಚಿಕನ್ ಬಿರಿಯಾನಿ, ಬಟರ್ ಚಿಕನ್,ಫ್ರೈಡ್ ಚಿಕನ್ ಮತ್ತು ಇನ್ನೂ ಅನೇಕ ಆಹಾರ ಪದಾರ್ಥಗಳು ಹೆಚ್ಚಿನ ಕ್ಯಾಲೊರಿ ಹೊಂದಿರುವ ಆಹಾರ ಪದಾರ್ಥಗಳು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಈ ರೀತಿ ನೀವು ನಿಮ್ಮ ತೂಕ ಹೆಚ್ಚಿಸಿಕೊಂಡರೆ ಅದು ಕೊಲೆಸ್ಟಾಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಮೂತ್ರದ ಸೋಂಕು
ಕೆಲವು ವಿಧದ ಕೋಳಿಮಾಂಸವನ್ನು ಸೇವಿಸುವುದು ಮೂತ್ರದ ಸೋಂಕನ್ನು ಉಂಟುಮಾಡಬಹುದು. ಅಮೇರಿಕನ್ ಸೋಸೈಟಿ ಫಾರ್ ಮೈಕ್ರೋಬಯಾಲಜಿ ಜನರಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ,ಕೋಳಿಯ ಮಾಂಸವನ್ನು ದಿನ ನಿತ್ಯವೂ ಸೇವಿಸುವುದರಿಂದ ಇದು ಮೂತ್ರದ ಸೋಂಕಿಗೆ ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ಪ್ರತಿಜೀವಕಗಳಿಲ್ಲದೇ ಬೆಳೆಸಿದ ಚಿಕನ್ ಅನ್ನು ಸೇವಿಸುವುದು ಉತ್ತಮವಾಗಿದೆ. ಆದ್ದರಿಂದ ದೈನಂದಿನವಾಗಿ ಇದರ ಸೇವನೆಯನ್ನು ಇಟ್ಟುಕೊಳ್ಳಬೇಡಿ.
PublicNext
29/07/2021 05:17 pm