ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಸಿಮೆಣಸು ಆರೋಗ್ಯಕ್ಕೆ ಎಷ್ಟು ಉಪಯುಕ್ತ

ಹಸಿಮೆಣಸನ್ನು ಇತಿಮಿತಿಯಲ್ಲಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಹಸಿಮೆಣಸನ್ನು ಕ್ರಮಪ್ರಕಾರವಾಗಿ ಸೇವಿಸುವುದರಿಂದ ದೇಹ ತೂಕ ಕಡಿಮೆಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಕೊಬ್ಬು ಹಾಗೂ ಕ್ಯಾಲೊರಿಗಳನ್ನು ಕಡಿಮೆ ಮಾಡಿ ದೇಹಾರೋಗ್ಯವನ್ನು ಕಾಪಾಡುತ್ತದೆ.

ಹಸಿಮೆಣಸಿಗೆ ಕ್ಯಾನ್ಸರ್ ಬೆಳೆಯುವ ಮತ್ತು ಹರಡುವುದನ್ನು ತಡೆಯುವ ಶಕ್ತಿ ಇದೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಹಸಿಮೆಣಸಿನೊಂದಿಗೆ ಜೀರಿಗೆ ಮತ್ತು ಅರಶಿನ ಬೆರೆಸಿ ಸೇವಿಸುವುದರಿಂದ ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಹೆಚ್ಚುತ್ತವೆ.

ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಖಿನ್ನತೆಯಂಥ ಸಮಸ್ಯೆಗಳು ದೂರವಾಗುತ್ತದೆ. ಸಂಧಿವಾತ, ತಲೆನೋವು ಮತ್ತು ವಾಕರಿಕೆಯಂಥ ರೋಗಗಳ ನಿವಾರಣೆಗೆ ಆಯುರ್ವೇದದಲ್ಲೂ ಈ ಮಸಾಲೆಗಳನ್ನು ಬಳಸುವಂತೆ ಸೂಚಿಸಲಾಗುತ್ತದೆ.

Edited By : Nirmala Aralikatti
PublicNext

PublicNext

01/03/2021 03:40 pm

Cinque Terre

22.04 K

Cinque Terre

1

ಸಂಬಂಧಿತ ಸುದ್ದಿ