ಇಟಾನಗರ: ಅರುಣಾಚಲ ಪ್ರದೇಶವು ಭಾನುವಾರ ಕೊರೊನಾ ವೈರಸ್ ಮುಕ್ತ ರಾಜ್ಯವಾಗಿದೆ. ರಾಜ್ಯದಲ್ಲಿ ಮೂರು ಸಕ್ರಿಯ ಪ್ರಕರಣಗಳಿದ್ದವು. ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಹಿರಿಯ ಆರೋಗ್ಯಾಧಿಕಾರಿ ಲೋಬ್ಸಂಗ್ ಜಂಪಾ ತಿಳಿಸಿದ್ದಾರೆ.
ಕಳೆದ 24 ಗಂಟೆಯಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ರಾಜ್ಯದಲ್ಲಿ ಒಟ್ಟು 16,836 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 16,780 ಸೋಂಕಿತರು ಗುಣಮುಖರಾಗಿದ್ದಾರೆ. ಸೋಂಕಿನಿಂದಾಗಿ ಈವರೆಗೆ 56 ಮಂದಿ ಮೃತಪಟ್ಟಿದ್ದಾರೆ. ಅರುಣಾಚಲ ಪ್ರದೇಶದ ಕೋವಿಡ್–19 ಚೇತರಿಕೆ ಪ್ರಮಾಣ ಶೇ 99.66 ಹಾಗೂ ಸೋಂಕು ಪ್ರಕರಣಗಳ ಪ್ರಮಾಣ ಶೂನ್ಯವಾಗಿದೆ. 4,05,647 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಶನಿವಾರ 312 ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು ಎಂದು ಲೋಬ್ಸಂಗ್ ಜಂಪಾ ಮಾಹಿತಿ ನೀಡಿದ್ದಾರೆ.
PublicNext
28/02/2021 04:14 pm