ಹೊಸದಿಲ್ಲಿ : ದೇಶದ ಹಲವು ರಾಜ್ಯಗಳಲ್ಲಿ ಕಳೆದ ಒಂದು ವಾರದಿಂದ ಹಟಾತ್ತನೇ ಭಾರಿ ಸಂಖ್ಯೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಿರುವುದು ಆತಂಕ ಸೃಷ್ಟಿಸಿದೆ.
ಕೇರಳ ಮಹಾರಾಷ್ಟ್ರ ಪಂಜಾಬ್ ಛತ್ತೀಸ್ ಗಡ, ಹಾಗೂ ಮಧ್ಯಪ್ರದೇಶಗಲ್ಲಿ ಮತ್ತೇ ಕೊರೊನಾ ತೀವ್ರ ಗತಿಯಲ್ಲಿ ಹರಡತೊಡಗಿದ್ದು ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹಾಗೂ ಛತ್ತೀಸ್ ಗಡದಲ್ಲಿ 260 ಪೊಜಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಅಲ್ಲಿಯ ಆರೋಗ್ಯ ಸಚಿವಾಲಯಗಳು ತಿಳಿಸಿವೆ.
ಕೇರಳದಲ್ಲಿ ನಿತ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿದ್ದು ಕೊರೊನಾ ನಿಯಂತ್ರಣಕ್ಕಾಗಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ರಾಜ್ಯಗಳಿಗೆ ಆದೇಶಿಸಲಾಗಿದೆ ಎಂದು ತಿಳಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಕಳೆದ ಒಂದು ವಾರದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಶೇ. 75 ರಷ್ಟು ಪ್ರಕರಣಗಳು ಕೇರಳ ಹಾಗೂ ಮಹಾರಾಷ್ಟ್ರಕ್ಕೆ ಸೇರಿವೆ ಎಂದೂ ಸಚಿವಾಲಯ ತನ್ನ ವರದಿಯಲ್ಲಿ ಹೇಳಿದೆ.
PublicNext
21/02/2021 10:33 am