ತುಮಕೂರು : ಕೊರೊನ ವಾರಿಯರ್‌ಗಳಿಗೆ ಕೊವಾಕ್ಸಿನ್ ಚುಚ್ಚುಮದ್ದು ನೀಡುವ ಅಭಿಯಾನ ದೇಶಾದ್ಯಂತ ನಡೆಯುತ್ತಿದೆ. ಅದರಂತೆ ತುಮಕೂರು ನಗರದಲ್ಲೂ ವಾಕ್ಸಿನ್ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾ ವೈದ್ಯಾಧಿಕಾರಿ(ಡಿಎಚ್ಒ) ನಾಗೇಂದ್ರಪ್ಪ ಮತ್ತು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರಜನಿ ಅವರು ಕ್ಯಾಮೆರಾ ಕಡೆ ಫೋಸ್ ಕೊಟ್ಟು ಕೊವ್ಯಾಕ್ಸಿನ್ ತೆಗೆದುಕೊಂಡಂತೆ ನಾಟಕ ಮಾಡಿದರು. ಈ ದೃಶ್ಯವು ವೀಡಿಯೋದಲ್ಲಿ ದಾಖಲಾಗಿದೆ.
ಕೊವಾಕ್ಸಿನ್ ಚುಚ್ಚುಮದ್ದು ತೆಗೆದುಕೊಂಡು ಇತರೆ ಕೊರೊನಾ ವಾರಿಯರ್‌ಗಳಿಗೆ ಸ್ಪೂರ್ತಿ, ಉತ್ಸಾಹ ತುಂಬ ಬೇಕಾಗಿದ್ದ ಡಿಎಚ್ಒ ನಾಗೇಂದ್ರಪ್ಪ ವಾಕ್ಸಿನ್ ತೆಗೆದುಕೊಳ್ಳುತ್ತಿರುವಂತೆ ಪೋಸ್ ನೀಡಿದರೇ ಹೊರತು ಸೂಜಿ ಸುಚ್ಚಿಸಿಕೊಳ್ಳಲೇ ಇಲ್ಲ. ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ರಜನಿಗೂ ಕೂಡ ವಾಕ್ಸಿನ್ ಕೊಡುತ್ತಿರುವಂತೆ ನಟಿಸಲಾಗಿದೆ. ಅಷ್ಟೇ ಯಾಕೆ? ಚುಚ್ಚುಮದ್ದು ಕೊಟ್ಟಂತೆ ಮಾಡಿದ ಮೇಲೆ ಚಪ್ಪಾಳೆ ತಟ್ಟಲಾಗಿದೆ.
PublicNext
21/01/2021 07:58 pm