ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೋಣ ತಾಲೂಕಿನ ಅರಹುಣಸಿಯಲ್ಲಿ 200 ಮಂದಿಗೆ ಏಕಾಏಕಿ ಜ್ವರ: ಊರು ಬಿಡುತ್ತಿದ್ದಾರೆ ಜನ

ರೋಣ: ತಾಲ್ಲೂಕಿನ ಅರಹುಣಸಿ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಸುಮಾರು 200 ಮಂದಿಗೆ ಜ್ವರ, ಕೆಮ್ಮು, ಗಂಟಲು ಕಡಿತ, ಶೀತ, ನೆಗಡಿಯ ಸಮಸ್ಯೆ ಕಾಡುತ್ತಿದೆ. ಇದೇ ರೀತಿಯ ರೋಗ ಲಕ್ಷಣ ಇರುವ ರೋಗಿಗಳ ಸಂಖ್ಯೆ ಗ್ರಾಮದಲ್ಲಿ ಹೆಚ್ಚುತ್ತಿದೆ. ವಿಚಿತ್ರ ಕಾಯಿಲೆಯ ಮೂಲ ಪತ್ತೆಗಾಗಿ ವೈದ್ಯರ ತಂಡ ಎರಡು ದಿನಗಳಿಂದ ಗ್ರಾಮದಲ್ಲಿ ಬೀಡುಬಿಟ್ಟು ಗ್ರಾಮಸ್ಥರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ.

ಗುರುವಾರ 303 ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸದಸ್ಯರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇದು ಸಾಂಕ್ರಾಮಿಕ ರೋಗ ಇರಬಹುದೆಂಬ ಶಂಕೆಯಲ್ಲಿ ಹಲವು ವೈರಸ್ ಗಳ ಲಕ್ಷಣಗಳ ಬಗ್ಗೆ ಶೋಧ ನಡೆದಿದೆ. ಅದಕ್ಕಾಗಿ ರಕ್ತ ಮತ್ತು ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಗ್ರಾಮದ ಎಲ್ಲ ಮನೆಗಳಿಗೂ ತೆರಳಿ ಆರೋಗ್ಯ ತಪಾಸಣೆ ನಡೆಸುತ್ತೇವೆ. ಎಂದು ಆರೋಗ್ಯ ಶಿಬಿರದ ವೈದ್ಯಾಧಿಕಾರಿ ಡಾ.ಸಂಗಮೇಶ ಬಂಕದ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

15/01/2021 03:43 pm

Cinque Terre

101.65 K

Cinque Terre

6