ಡೆಡ್ಲಿ ಸೋಂಕು ಕೊರೊನಾ,ರೂಪಾಂತರಿ ಮಧ್ಯೆ ಹಕ್ಕಿ ಜ್ವರ ಆತಂಕ ಹೆಚ್ಚಾಗಿದೆ.
ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಇದರ ನಡುವೆ ಚಿಕನ್ , ಮೊಟ್ಟೆ ತಿನ್ನುವುದು ಎಷ್ಟು ಸೇಫ್ ಎನ್ನುವುದು ಎಲ್ಲರ ಪ್ರಶ್ನೆ.
ಕೇರಳದಲ್ಲಿ ಹಕ್ಕಿ ಜ್ವರ ದಾಳಿ ಇಟ್ಟ ಬೆನ್ನಲ್ಲೇ ಎಮರ್ಜೆನ್ಸಿ ಘೋಷಿಸಲಾಗಿದೆ. ಮಧ್ಯಪ್ರದೇಶದಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ವ್ಯಾಪಾರಿಗಳಿಗೆ ಬಂದ್ ಮಾಡುವಂತೆ ಆದೇಶಿಸಲಾಗಿದೆ. ಸಾಮಾನ್ಯವಾಗಿ ಹಕ್ಕಿ ಜ್ವರ ಆವರಿಸಿದಾಗ ನಾನ್ ವೆಜ್ ಶಾಪ್ ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.
ಹಾಗಾದ್ರೆ ಹಕ್ಕಿ ಮಾಂಸ ಹಾಗೂ ಮೊಟ್ಟೆ ತಿನ್ನುವುದು ಅದೆಷ್ಟು ಸುರಕ್ಷಿತ? ಇಂತಹ ಪರಿಸ್ಥಿತಿಯಲ್ಲಿ ನಾನ್ ವೆಜ್ ನಿಂದ ದೂರವಿರುವುದೇ ಉತ್ತಮ. ಸಾಧ್ಯವೇ ಇಲ್ಲ ಎಂದಾದರೆ ಕೆಲ ವಿಚಾರಗಳನ್ನು ಅಗತ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು.
ತಜ್ಞರ ಅನ್ವಯ ಮಾಂಸ ಹಾಗೂ ಮೊಟ್ಟೆ ತಿನ್ನಬಹುದು. ಆದರೆ ತಿನ್ನುವುದಕ್ಕೂ ಮುನ್ನ ಇವುಗಳನ್ನು ಚೆನ್ನಾಗಿ ಬೇಯಿಸಬೇಕು.
ಕೋಳಿ ಮಾಂಸ ಮಾಡುವಾಗ ಚೆನ್ನಾಗಿ ಕಾಯಿಸಬೇಕು. ಅದರಲ್ಲೂ ವಿಶೇಷವಾಗಿ ಮಾಂಸ ಮೂಳೆಯಿಂದ ಬೇರ್ಪಡುವವರೆಗೂ ಬೇಯಿಸುತ್ತಿರಿ. ಹೀಗೆ ಮಾಡಿ ತಿನ್ನುವುದು ಬಹಳ ಸುರಕ್ಷಿತ.
ಈ ಮೂಲಕ ಹಕ್ಕಿ ಜ್ವರ ಇದ್ದರೂ ನೀವು ಮಾಂಸ ಹಾಗೂ ಮೊಟ್ಟೆ ತಿನ್ನಬಹುದು. ಅಷ್ಟು ತಾಪಮಾನದಲ್ಲಿ ವೈರಸ್ ಬದುಕುಳಿಯುವುದಿಲ್ಲ ಎಂಬುವುದು ಖಚಿತ.
PublicNext
09/01/2021 02:30 pm