ಬೆಂಗಳೂರು: ಕೊರೊನಾ,ರೂಪಾಂತರಿ ಮಧ್ಯೆ ಹಕ್ಕಿ ಜ್ವರ ಜನರಲ್ಲಿ ಆತಂಕ ಹೆಚ್ಚಿಸಿದೆ.
ದಕ್ಷಿಣ ಕನ್ನಡ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಗೆಗಳು ಸತ್ತಿರುವುದು ಬೇರೆ ಕಾರಣದಿಂದಾಗಿ. ಅದು ಹಕ್ಕಿ ಜ್ವರದಿಂದ ಅಲ್ಲ. ಹಕ್ಕಿಗಳು ಅನುಮಾನಾಸ್ಪದವಾಗಿ ಸತ್ತಿದ್ರೆ ಅದನ್ನು ಕೈಯಿಂದ ಮುಟ್ಟಬೇಡಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.
ಮಾಂಸಹಾರಿಗಳು ಕೋಳಿ ಮೊಟ್ಟೆ, ಮಾಂಸವನ್ನು ಹೆಚ್ಚು ಬೇಯಿಸಿ ಆಹಾರ ಸೇವಿಸಿ. ಅದಕ್ಕಾಗಿ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ಸಲಹೆ ನೀಡಿದರು.
ಇನ್ನೇನು ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದೆ. ಈ ಬಾರಿಯ ಹಬ್ಬದಂದು ಜನಜಂಗುಳಿ ಇಲ್ಲದೆ ಸರಳವಾಗಿ ಸಂಕ್ರಾಂತಿ ಹಬ್ಬ ಆಚರಿಸಿ. ಸಂಕ್ರಾಂತಿಗೆ ಯಾವುದೇ ವಿಶೇಷ ಮಾರ್ಗಸೂಚಿ ಇರುವುದಿಲ್ಲ.
ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದಿದ್ದಾರೆ.
PublicNext
08/01/2021 11:50 am