ಬೆಂಗಳೂರು: ಹಕ್ಕಿಜ್ವರವು ಕರ್ನಾಟಕದ ಕುಕ್ಕುಟೋದ್ಯಮದ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇಲ್ಲ, ಜನ ವದಂತಿಗಳಿಗೆ ಕಿವಿಗೊಡದಿದ್ದರೆ ವಹಿವಾಟು ಸುರಕ್ಷಿತ ಎಂದು 'ಕರ್ನಾಟಕ ಪೌಲ್ಟ್ರಿ ಫಾರ್ಮ ರ್ಸ್ ಮತ್ತು ಬ್ರೀಡ್ಸ್ ಅಸೋಸಿಯೇಷನ್' ಹೇಳಿದೆ.
'ಅಸೋಸಿಯೇಷನ್ ಹೊರಡಿಸಿರುವ ಮಾರ್ಗಸೂಚಿಗಳನ್ನು ಕೋಳಿ ಸಾಕಣೆ ಕೇಂದ್ರಗಳಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ.
ಸಾಕಣೆ ಕೇಂದ್ರಗಳನ್ನು ಸ್ವಚ್ಛವಾಗಿ ಇರಿಸಲು ಜೈವಿಕ ಭದ್ರತಾ ಕ್ರಮಗಳನ್ನು ಪಾಲಿಸಲಾಗುತ್ತಿದೆ.
ಹೀಗಾಗಿ, ಸದ್ಯದ ಮಟ್ಟಿಗೆ ಹಕ್ಕಿಜ್ವರದ ಪರಿಣಾಮ ನಮ್ಮಲ್ಲಿ ಕಾಣಿಸಿಲ್ಲ.
'ಭಾರತೀಯ ಶೈಲಿಯಲ್ಲಿ ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿದರೆ ಯಾವುದೇ ವೈರಾಣು ಉಳಿಯುವುದಿಲ್ಲ.
ಹಕ್ಕಿಜ್ವರಕ್ಕೆ ಸಂಬಂಧಿಸಿದ ವದಂತಿಗಳಿಗೆ ಜನ ಕಿವಿಗೊಟ್ಟರೆ ಮಾತ್ರವೇ ಮಾರಾಟದಲ್ಲಿ ಇಳಿಕೆ ಆಗುವ ಅಪಾಯ ಇದೆ.
ಕೋಳಿ ಮಾಂಸ ಸೇವನೆಯಿಂದ ಕೋವಿಡ್-19 ಬರುತ್ತದೆ ಎನ್ನುವ ವದಂತಿ ಹರಡಿದ್ದರಿಂದ 2020ರ ಏಪ್ರಿಲ್
ನಲ್ಲಿ ವಹಿವಾಟಿನ ಮೇಲೆ ತೀವ್ರ ಹೊಡೆತ ಬಿದ್ದಿತ್ತು.
ಕೋಳಿ ಮಾಂಸವು ಸೇವನೆಗೆ ಸುರಕ್ಷಿತವಾಗಿದೆ ಎನ್ನುವುದು ಜನರಿಗೆ ಮನವರಿಕೆ ಆದ ನಂತರ ಮಾರಾಟದಲ್ಲಿ ಸುಧಾರಣೆ ಕಂಡಬಂದಿತು.
PublicNext
08/01/2021 07:31 am