ನವದೆಹಲಿ : ಕೊರೊನಾದಿಂದ ಕಂಗೆಟ್ಟ ಜನಕ್ಕೆ ರೂಪಾಂತರಿ ಶಾಕ್ ನೀಡುತ್ತಿದೆ.
ವಿಶ್ವದಾದ್ಯಂತ ಆತಂಕದ ಹೊಸ ಅಲೆ ಸೃಷ್ಟಿಸಿರುವ ಬ್ರಿಟನ್ ಹೈಸ್ಪೀಡ್ ಕೊರೋನಾ ವೈರಸ್ ಮಾದರಿ ಭಾರತದಲ್ಲಿ ದಿನೇ ದಿನೇ ಹೆಚ್ಚಳವಾಗುವ ಸುಳಿವು ಕಂಡು ಬರುತ್ತಿದೆ.
ಬುಧವಾರ ಮತ್ತೆ 13 ಮಂದಿಯಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 13 ಜನರಲ್ಲಿ ಹೊಸ ಬ್ರಿಟನ್ ರೂಪಾಂತರದ ಕೊರೋನಾ ಸೋಂಕು ಪತ್ತೆಯಾಗುವುದರೊಂದಿಗೆ ಹೊಸ ತಳಿಯ ಸೋಂಕಿಗೆ ಗುರಿಯಾದವರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ವಿವಿಧ ರಾಜ್ಯಗಳಿಂದ ರವಾನಿಸಲಾಗಿದ್ದ ಸೋಂಕಿತರ ವರದಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರದಲ್ಲಿ ಪರೀಕ್ಷೆಗೊಳಪಡಿಸಲಾಗಿದೆ.
ಈಗಾಗಲೇ ಎಲ್ಲಾ ಸೋಂಕಿತರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಐಸೋಲೇಷನ್ ನಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
PublicNext
06/01/2021 02:06 pm