ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದಲ್ಲಿ 30 ಕೋಟಿ ಜನರಿಗೆ ಕೋವಿಡ್-19 ಲಸಿಕೆ ವಿತರಣೆಗೆ ಸಿದ್ಧತೆ

ನವದೆಹಲಿ: ಕೋವಿಡ್-19 ಲಸಿಕೆ ವಿತರಣೆಗೆ ದೇಶವು ಸಂಪೂರ್ಣ ಸಜ್ಜಾಗಿದ್ದು, ಜುಲೈ ವೇಳೆಗೆ 30 ಕೋಟಿ ಜನರಿಗೆ ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಜಗತ್ತಿನಲ್ಲೇ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಅತಿ ದೊಡ್ಡ ಲಸಿಕೆ ಕಾರ್ಯಕ್ರಮಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಲಿದೆ.

ಅಧಿಕಾರಿಗಳು ದೇಶಾದ್ಯಂತ ಸುಮಾರು 29,000 ಕೋಲ್ಡ್ ಸ್ಟೋರೆಜ್ ಸೌಲಭ್ಯಗಳನ್ನು ಸಿದ್ಧಪಡಿಸಿದ್ದಾರೆ.

ಅಲ್ಲದೆ ಎಲ್ಲ ರಾಜ್ಯಗಳು ಸೇರಿದಂತೆ 125 ಜಿಲ್ಲೆಗಳಲ್ಲಿ ಅತಿ ದೊಡ್ಡ ಲಸಿಕೆ ತಾಲೀಮು (ಡ್ರೈ-ರನ್) ನಡೆಸಲಾಗಿದೆ ಎಂದು ಫೆಡರಲ್ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದರು.

ಕೋವಿಡ್-19 ಲಸಿಕೆ ವಿತರಣೆಯ ನಿರ್ದಿಷ್ಟ ದಿನಾಂಕದ ಬಗ್ಗೆ ವಿಚಾರಿಸಿದಾಗ ಈ ಸಂಬಂಧ ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

Edited By : Nirmala Aralikatti
PublicNext

PublicNext

06/01/2021 08:07 am

Cinque Terre

68.66 K

Cinque Terre

1