ಲಿಸ್ಬನ್: ಫೈಜರ್ ಸಂಸ್ಥೆಯ ಕೋವಿಡ್-19 ಲಸಿಕೆ ಸ್ವೀಕರಿಸಿದ 48 ಗಂಟೆಯಲ್ಲಿ ಆರೋಗ್ಯ ಕಾರ್ಯಕರ್ತೆ ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಆಘಾತಕಾರಿ ಘಟನೆ ಪೋರ್ಚುಗಲ್ನಲ್ಲಿ ನಡೆದಿದೆ.
ಸೋನಿಯಾ ಅಕೆವೆಡೋ (41) ಮೃತ ಆರೋಗ್ಯ ಕಾರ್ಯಕರ್ತೆ. ಕೊರೊನಾ ಲಸಿಕೆ ಸ್ವೀಕರಿಸಿದ ನಂತರ ಸೋನಿಯಾ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಲಕ್ಷಣಗಳು ಕಂಡುಬಂದಿರಲಿಲ್ಲ. ಆದಾಗ್ಯೂ ಅವರ ಸಾವಿಗೆ ಕಾರಣಗಳೇನು? ಲಸಿಕೆಯಿಂದ ಸಾವು ಸಂಭವಿಸಿರಬಹುದೇ? ಎಂಬುದು ನಿಗೂಢವಾಗಿದೆ. ಸೋನಿಯಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ನಂತರವಷ್ಟೇ ಸಾವಿನ ಕಾರಣ ಬಯಲಾಗಬೇಕಿದೆ.
''ತನ್ನ ಮಗಳಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಲಸಿಕೆ ಸ್ವೀಕರಿಸಿದ ನಂತರವೂ ಸಮಸ್ಯೆಗಳು ಕಂಡುಬಂದಿಲ್ಲ. ಆಕೆ ಯಾವ ಕಾರಣದಿಂದ ಸಾವನ್ನಪ್ಪಿದ್ದಾಳೆ ಎಂದು ನನಗೆ ಗೊತ್ತಾಗುತ್ತಿಲ್ಲ. ಸದ್ಯಕ್ಕೆ ನನಗೆ ನನ್ನ ಮಗಳ ಸಾವು ಹೇಗಾಯಿತು ಎಂದು ಉತ್ತರ ಬೇಕಿದೆ'' ಎಂದು ಸೋನಿಯಾ ತಂದೆ ಆಗ್ರಹಿಸಿದ್ದಾರೆ.
PublicNext
05/01/2021 01:45 pm