ನವದೆಹಲಿ: ಕೊರೊನಾ ಹಾವಳಿಯ ಮಧ್ಯೆಯೇ ಜನರ ನಿದ್ದೆ ಕದಡುತ್ತಿರುವ ರೂಪಾಂತರ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಲೇ ಇದೆ.
ಬ್ರಿಟನ್ ಭೂತ ಭಾರತವನ್ನು ಬೆಂಬಿಡದೇ ಕಾಡುತ್ತಿದೆ…
ಸದ್ಯ ದೇಶದಲ್ಲಿ ಸೋಂಕಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿರುವುದಾಗಿ ಎಎನ್ ಐ ಟ್ವೀಟ್ ಮಾಡಿದೆ.
ಪುಣೆಯಲ್ಲಿ 4, ದೆಹಲಿಯ ಐಜಿಐಬಿಯಲ್ಲಿ ಒಂದು ಹೊಸ ಪ್ರಕರಣಗಳು ಪತ್ತೆಯಾಗಿವೆ. ಎಲ್ಲ 25 ಮಂದಿಯನ್ನು ಐಸೋಲೇಶನ್ ನಲ್ಲಿ ಇರಿಸಲಾಗಿದ್ದು, ಸರ್ಕಾರದಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ನಿನ್ನೆವರೆಗೆ ರಾಜ್ಯದಲ್ಲಿ 7 ಬ್ರಿಟನ್ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು.
ಇವತ್ತು ಯಾವುದೇ ಹೊಸ ಪ್ರಕರಣ ಬರದಿರುವುದು ನಿಟ್ಟುಸಿರುಬಿಡುವಂತೆ ಮಾಡಿದೆ.
ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿರುವ ಹೊಸ ಮಾದರಿಯ ಕೊರೋನಾ ಈ ಹಿಂದಿನ ವೈರಾಣುಗಳಿಗಿಂತ ಶೇ 60ರಷ್ಟು ಹೆಚ್ಚು ವೇಗವಾಗಿ ಹರಡುವ ಹಿನ್ನೆಲೆಯಲ್ಲಿ ಎಲ್ಲೆಡೆ ಎಚ್ಚರಿಕೆ ವಹಿಸಲಾಗುತ್ತಿದೆ.
PublicNext
31/12/2020 11:59 am