ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿಗೂ ಬಂತು ಬ್ರಿಟನ್ ಭೂತ : ಸೋಂಕಿತರ ಅಪಾರ್ಟ್ ಮೆಂಟ್ ಸೀಲ್ ಡೌನ್

ಬೆಂಗಳೂರು: ಡೆಡ್ಲಿ ಸೋಂಕಿನಿಂದ ತತ್ತರಿಸಿದ ಜನ ಈಗಷ್ಟೇ ಸಹಜ ಸ್ಥಿಗೆ ಮರಳುತ್ತಿದ್ದರು.

ಎಲ್ಲವೂ ಸರಿಹೋಗುತ್ತಿದೆ ಎನ್ನುವಷ್ಟರಲ್ಲಿ ಬ್ರಿಟನ್ ನಿಂದ ಬಂತು ನೋಡಿ ಭೂತ ಈಗ ಮತ್ತೆ ಜನರಲ್ಲಿ ನಡುಕ ಶುರುವಾಗಿದೆ.

ಈಗಾಗಲೇ ಡೆಡ್ಲಿ ರೂಪಾಂತರ ಸೋಂಕು ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿದೆ.

ನಗರದ 34 ವರ್ಷದ ಮಹಿಳೆ ಮತ್ತು ಅವರ ಆರು ವರ್ಷದ ಮಗುವಿಗೆ ಬ್ರಿಟನ್ ರೂಪಾಂತರ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇವರು ನೆಲೆಸಿದ್ದ ವಸಂತನಗರ ವಾರ್ಡ್ ನ ವಿಠ್ಠಲ ನಗರದ ಅಪಾರ್ಟ್ಮೆಂಟ್ ಅನ್ನು ಬಿಬಿಎಂಪಿ ಸೀಲ್ ಡೌನ್ ಮಾಡಿದೆ.

ಈ ಅಪಾರ್ಟ್ ಮೆಂಟ್ ನಲ್ಲಿದ್ದ 37 ನಿವಾಸಿಗಳ ಕ್ವಾರಂಟೈನ್ ಕೇಂದ್ರಗಳಿಗೆ ಹೋಗಲು ನಿರಾಕರಿಸುತ್ತಿದ್ದಂತೆ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ.

ಎಲ್ಲ ನಿವಾಸಿಗಳ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದ್ದು, ಆರ್–ಪಿಸಿಆರ್ ಪರೀಕ್ಷೆಗೆ ಮಾದರಿ ಕಳುಹಿಸಲಾಗಿದೆ.

ಈ ವಾರ್ಡ್ ನ ಮಾಜಿ ಸದಸ್ಯೆ ಶೋಭಾ ಗೌಡ ಈ ಅಪಾರ್ಟ್ ಮೆಂಟ್ ನಲ್ಲಿದ್ದ 37 ನಿವಾಸಿಗಳನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸುವಂತೆ ದೆಹಲಿಯಿಂದ ಆದೇಶ ಬಂದಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಹೇಳುತ್ತಾರೆ.

ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಟ್ಟರೆ ಸಮಸ್ಯೆಯಾಗುತ್ತದೆ ಎಂದು ನಿವಾಸಿಗಳು ಹೇಳುತ್ತಾರೆ.

ಎಲ್ಲರೂ ಆರೋಗ್ಯದಿಂದಿದ್ದು, ಹೋಮ್ ಕ್ವಾರಂಟೈನ್ ಗೆ ಒಳಗಾಗುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.

ಈಗ ಅಪಾರ್ಟ್ ಮೆಂಟ್ ನಿವಾಸಿಗಳಲ್ಲೆಲ್ಲರೂ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದು, ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರತಿದಿನ ಅಪಾರ್ಟ್ ಮೆಂಟ್ ಆವರಣವನ್ನು ಸ್ಯಾನಿಟೈಸ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ.

Edited By : Nirmala Aralikatti
PublicNext

PublicNext

29/12/2020 06:05 pm

Cinque Terre

61.54 K

Cinque Terre

2