ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೂರೋಪ್‌ನ 8 ದೇಶಗಳಲ್ಲಿ ಕೋವಿಡ್ ರೂಪಾಂತರ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ

ಲಂಡನ್: ಯೂರೋಪ್‍ ಪ್ರಾಂತ್ಯದ 8 ದೇಶಗಳಲ್ಲಿ ಇದೀಗ ಕೋವಿಡ್-19 ರೂಪಾಂತರ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ ರಕ್ಷಣಾತ್ಮಕ ಕ್ರಮಗಳನ್ನು ಬಲಪಡಿಸುವುದು ಬಹಳ ಮುಖ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯೂರೋಪ್‌ನ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಕ್ಲುಗೆ ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ''ಈ ರೂಪಾಂತರವು ಹಿಂದಿನ ತಳಿಗಳಿಗಿಂತ ಭಿನ್ನವಾಗಿ ಕಿರಿಯ ವಯಸ್ಸಿನವರಲ್ಲಿ ಹರಡುತ್ತಿದೆ. ಅದರ ಪ್ರಭಾವವನ್ನು ತಿಳಿಯಲು ಸಂಶೋಧನೆ ನಡೆಯುತ್ತಿರುವಾಗ ಜಾಗರೂಕತೆ ಮುಖ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು, ನವೀಕೃತ ಮಾಹಿತಿಯನ್ನು ಒದಗಿಸಲಿದೆ. ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು ಮತ್ತಿತರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.

Edited By : Vijay Kumar
PublicNext

PublicNext

26/12/2020 12:43 pm

Cinque Terre

52.79 K

Cinque Terre

0