ಲಖನೌ: ಕುಡುಕನೊಬ್ಬನಿಗೆ ಕಚ್ಚಿದ ಹಾವು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕುಶೀನಗರದಲ್ಲಿ ನಡೆದಿದೆ.ಹೌದು ಸಾಮಾನ್ಯವಾಗಿ ಹಾವು ಕಚ್ಚಿ ಮನುಷ್ಯ ಸಾಯುವುದನ್ನು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಅದರಲ್ಲೂ ನಾಗರನ ಹಾವಿನ ವಿಷ ಅತ್ಯಂತ ಅಪಾಯಕಾರಿ. ಆದ್ರೆ ಇಲ್ಲೊಂದು ಘಟನೆಯಲ್ಲಿ ವ್ಯಕ್ತಿಗೆ ಕಚ್ಚಿದ ನಾಗರಹಾವು ಮೃತಪಟ್ಟಿದೆ.
ಪಾನಮತ್ತ ವ್ಯಕ್ತಿಯೊಬ್ಬ ಉತ್ತರ ಪ್ರದೇಶದ ಕುಶೀನಗರ ಜಿಲ್ಲಾಸ್ಪತ್ರೆಯ ತುರ್ತು ವಿಭಾಗಕ್ಕೆ ನಿನ್ನೆ (ಅ.123) ಗಾಬರಿಯಿಂದಲೇ ಧಾವಿಸಿ ಬಂದು, ತನಗೆ ನಾಗರಹಾವು ಕಡಿದಿದೆ ಎಂದು ಹೇಳಿದ್ದಾನೆ.
ಬಳಿಕ ಆ ವ್ಯಕ್ತಿ ಹೇಳಿದ್ದನ್ನು ಕೇಳಿ ವೈದ್ಯರೇ ಶಾಕ್ ಆಗಿದ್ದಾರೆ. ತನಗೆ ಎರಡು ಬಾರಿ ಕಚ್ಚಿದ ನಾಗರ ಹಾವು ಸತ್ತು ಹೋಯಿತು ಎಂದಿದ್ದಾನೆ. ಈ ರೀತಿ ಹೇಳಿದರೆ ಯಾರು ನಂಬುವುದಿಲ್ಲ ಅಂತಾ ಸತ್ತು ಹೋದ ಹಾವನ್ನು ಸಹ ಒಂದು ಕವರ್ ನಲ್ಲಿ ಹಾಕಿಕೊಂಡು ತನ್ನೊಂದಿಗೆ ಆಸ್ಪತ್ರೆಗೆ ತಂದಿದ್ದಾನೆ. ಕೊನೆಗೆ ಅದನ್ನು ನೋಡಿ ವೈದ್ಯರೆ ಬೆಸ್ತು ಬಿದ್ದಿದ್ದಾರೆ.
ಕಶ್ಯಪ್ ಮೀಮರ್ ಹೆಸರಿನ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿರುವ ವ್ಯಕ್ತಿ ವೈದ್ಯರೊಂದಿಗೆ ಮಾತನಾಡುವಾಗ, ಮದ್ಯಮ ಅಮಲಿನಲ್ಲಿರುವುದನ್ನು ಕಾಣಬಹುದು. ತನಗೆ ಬೇಕಾದ ಚುಚ್ಚುಮದ್ದು ನೀಡುವಂತೆ ವೈದ್ಯರಲ್ಲಿ ಕೇಳಿಕೊಂಡಿದ್ದಾನೆ.
PublicNext
13/10/2022 03:59 pm