ಬರೇಲಿ: ಇತ್ತೀಚಿನ ವರ್ಷಗಳಲ್ಲಿ ಯಾರ ಸಾವು ಹೇಗೆ? ಎಲ್ಲಿ? ಯಾವಾಗ ಬರುತ್ತದೆ ಅನ್ನೋದು ಗೊತ್ತೇ ಆಗಲ್ಲ. ಈ ಕ್ಷಣ ಇದ್ದವರು ಮುಂದಿನ ಕ್ಷಣ ಇರೋದಿಲ್ಲ.
ಅಂತದ್ದೇ ಘಟನೆಯೊಂದರ ವಿಡಿಯೋ ಈಗ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ಐವಿಆರ್‌ವಿ ಎಂಬ ಸಂಸ್ಥೆಯಲ್ಲಿ ಸಹಾಯಕ ತಂತ್ರಜ್ಞರಾಗಿ ಸೇವೆಯಲ್ಲಿದ್ದ ಪ್ರಭಾತ್ ಎಂಬ ಇವರು ಸ್ನೇಹಿತ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಹಿಂದಿ ಹಾಡೊಂದಕ್ಕೆ ಮೈ ಮರೆತು ಡ್ಯಾನ್ಸ್ ಮಾಡುತ್ತಿದ್ದರು. ಇವರ ಈ ನರ್ತನವನ್ನು ನೆರೆದಿದ್ದ ಎಲ್ಲರೂ ಎಂಜಾಯ್ ಮಾಡುತ್ತಿದ್ದರು.ಈ ವೇಳೆ ಅಚಾನಕ್ ಆಗಿ ಪ್ರಭಾತ್ ಅವರು ಕುಸಿದು ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನಂತರ ಪರಿಶೀಲಿಸಿದ ವೈದ್ಯರು ಹೃದಯಾಘಾತದಿಂದ ಪ್ರಭಾತ್ ನಿಧನರಾಗಿದ್ದಾರೆ ಎಂದು ಧೃಢಪಡಿಸಿದ್ದಾರೆ.
PublicNext
02/09/2022 09:06 pm