ಬಾಗಲಕೋಟೆ: ಧನ್ವಂತರಿ ಆಯುರ್ವೇದದ ದೇವತೆ. ಶ್ರೀಮನ್ ಮಹಾವಿಷ್ಣುವಿನ ಅವತಾರ. ಸಮುದ್ರ ಮಥನದ ಸಂದರ್ಭದಲ್ಲಿ ಧನ್ವಂತರಿ ದೇವರು ಅಮೃತ ಕಲಶವನ್ನಿಟ್ಟುಕೊಂಡು ಪ್ರತ್ಯಕ್ಷರಾಗುತ್ತಾರೆ ಎಂಬ ಮಾತಿದೆ. ಹಾಗಾಗಿ ಮನೆಯಲ್ಲಿ ಯಾರಿಗಾದರೂ ತೀವ್ರ ಅನಾರೋಗ್ಯವಾದಲ್ಲಿ ಧನ್ವಂತರಿ ಆರಾಧನೆ ಮಾಡಿದರೆ, ಅಥವಾ ಧನ್ವಂತರಿ ಮಹಾವಿಷ್ಣುವಿನ ಮಂತ್ರವನ್ನು ಪಠಣ, ಶ್ರವಣ ಮಾಡಿದರೆ ಉತ್ತಮ ಫಲ ಪಡೆಯಬಹುದು ಎಂಬ ಪ್ರತೀತಿ ಇದೆ..
ಹೀಗಾಗಿ ಈ ವೈದ್ಯರು ಮಂತ್ರ ಪಠಣ ಮಾಡುವ ಮೂಲಕ ದೇವರಲ್ಲಿ ಪ್ರಾರ್ಥಿಸಿ, ತಮ್ಮ ರೋಗಿಯ ಶಸ್ತ್ರ ಚಿಕಿತ್ಸೆ ಫಲಕಾರಿ ಯಾಗಲಿ ಎಂದು ಬೇಡಿಕೊಂಡಿದ್ದಾರೆ. ಬಾಗಲಕೋಟೆಯ ಆಸ್ಪತ್ರೆಯೊಂದರಲ್ಲಿ ವೈದ್ಯರು ಧನ್ವಂತರಿ ಮಂತ್ರ ಪಠಿಸಿದ ಈ ವಿಡಿಯೋ ಸದ್ಯ ಎಲ್ಲಡೆ ವೈರಲ್ ಆಗುತ್ತಿದೆ.
PublicNext
03/03/2022 01:09 pm